

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮದಿಹಾಳದ ಚಿದಂಬರ ಸೇವಾ ಸಮಿತಿ ಸಭಾಭವನದಲ್ಲಿ ಪತಂಜಲಿ ಯೋಗ ಪೀಠದ ಕರ್ನಾಟಕ ವರಿಷ್ಠ ರಾಜ್ಯ ಪ್ರಭಾರಿ ಹಾಗೂ ಅಂತಾರಾಷ್ಟ್ರೀಯ ಯೋಗ ಗುರು ಶ್ರೀ ಭವರಲಾಲ್ ಆರ್ಯ ಅವರ ಮಾರ್ಗರ್ಶನದಲ್ಲಿ ಹುಬ್ಬಳ್ಳಿ- ಧಾರವಾಡದ ಎಲ್ಲ ವಾರ್ಡ್ ಗಳಿಗೆ ಪತಂಜಲಿ ವಾರ್ಡ್ ಯೋಗ ಪ್ರಭಾರಿಗಳ ನೇಮಕ ಮಾಡಲಾಯಿತು.
ಈ ವೇಳೆ ಭವರಲಾಲ್ ಆರ್ಯ ಮಾತನಾಡಿ, ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವಾರ್ಡ್ಗಳು ಮತ್ತು ಎಲ್ಲ ಜಿಲ್ಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಪತಂಜಲಿ ಯೋಗ ಸಮಿತಿ ವತಿಯಿಂದ ರಾಜ್ಯದಲ್ಲಿ 15,000 ಯೋಗ ಶಿಕ್ಷಕರಿದ್ದಾರೆ. ಯೋಗ ದಿನಾಚರಣೆ ಪ್ರಯುಕ್ತ ಅಭ್ಯಾಸ ಆರಂಭಿಸಿದ್ದು, ಶಿಕ್ಷಣ ಸಂಸ್ಥೆಗಳು, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘ- ಸಂಸ್ಥೆಗಳು ಅವರ ಸೇವೆಯನ್ನು ಬಳಸಿಕೊಳ್ಳಬಹುದು ಎಂದರು.
ಇ0ದಿನ ಒತ್ತಡದ ಜೀವನ ಪದ್ಧತಿಯಲ್ಲಿ ರಕ್ತದೊತ್ತಡ, ಮಧುಮೇಹ ಸಾಮಾನ್ಯ ಕಾಯಿಲೆ ಆಗಿದೆ. ಯೋಗಾಸನ ಮತ್ತು ಪ್ರಾಣಾಯಾಮದಿಂದ ಇವುಗಳನ್ನು ನಿಯಂತ್ರಿಸಬಹುದು. ಕರಿದ ಪದಾರ್ಥ ಸೇವಿಸಬಾರದು. ಸಾತ್ವಿಕ ಆಹಾರ ಪದ್ಧತಿ ಅಳವಡಿಸಿಕೊಂಡರೆ ನಿರೋಗಿಯಾಗಿ ಬದುಕಬಹುದು ಎಂದರು.
ಚಿದ0ಬರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಕುಲರ್ಣಿ, ಪತಂಜಲಿ ಪರಿವಾರದ ಉಮಾ ಅಗಡಿ, ರಮೇಶ ಸುಲಾಖೆ, ಎಂ.ಡಿ.ಪಾಟೀಲ, ಶೈಲಜಾ ಮಾಡಿಕರ, ಲಕ್ಷ್ಮೀ ಬಡಿಗೇರ, ಭಾಸ್ಕರ ಬಡಿಗೇರ, ಬಸವರಾಜ ಮುಮ್ಮಿಗಟ್ಟಿ, ಬಲರಾಜಸಿಂಗ್ ಜಾವುರ, ರತ್ನಾ ಜಾವುರ, ವಿದ್ಯಾ ಹಜಾರೆ, ರಾಜೇಶ್ವರಿ ಹಡಗಲಿ, ನೇಹಾ ಬುದ್ನಿ, ಸವಿತಾ ಶಿಂಧೆ, ಇತರರಿದ್ದರು.