ಪೋಕ್ಸೋ ಪ್ರಕರಣದಡಿ ಪಾದ್ರಿ ಬಂಧನ

Pastor Francis Fernandez
ಪಾದ್ರಿ ಫ್ರಾನ್ಸಿಸ್ ಫರ್ನಾಂಡೀಸ್.
Published on

ಶಿವಮೊಗ್ಗ: ನಗರದ ಖಾಸಗಿ ಕಾಲೇಜಿನ ಪ್ರಾಚಾರ್ಯ ಹಾಗೂ ಏಷ್ಯಾದ ಎರಡನೇ ಅತಿ ದೊಡ್ಡ ಚರ್ಚ್‌ನ ಪಾದ್ರಿಯೊಬ್ಬರನ್ನು ಪೋಕ್ಸೋ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬಿ.ಎಚ್.ರಸ್ತೆಯಲ್ಲಿರುವ ಚರ್ಚ್‌ನ ಪಾದ್ರಿ ಫ್ರಾನ್ಸಿಸ್ ಫರ್ನಾಂಡೀಸ್ ಬಂಧಿತ. ಪಾದ್ರಿ ಫ್ರಾನ್ಸಿಸ್ ಫರ್ನಾಂಡೀಸ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಅಲ್ಲದೆ, ಜಾತಿ ನಿಂದನೆ ಮಾಡಿದ್ದರು ಎಂದು ಸಂತ್ರಸ್ತೆ 17 ವರ್ಷದ ಬಾಲಕಿ ಕೋಟೆ ಠಾಣೆಗೆ ಪೋಕ್ಸೋ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.
ಪಾದ್ರಿಯನ್ನು ಬಂಧಿಸಿರುವ ಕೋಟೆ ಠಾಣೆ ಪೊಲೀಸರು ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಪಾದ್ರಿ ಬಂಧನದ ಬೆನ್ನಲ್ಲೆ ಸಂತ್ರಸ್ತೆ ಪರವಾಗಿ ಕೋಟೆ ಠಾಣೆ ಎದುರು ಜಮಾಯಿಸಿದ್ದ ಸಮುದಾಯದವರು ಪಾದ್ರಿಯನ್ನು ಗಲ್ಲಿಗೇರಿಸುವಂತೆ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net