ಗದಗ- ಗಜೇಂದ್ರಗಡ ಬಸ್ ನಿಲ್ದಾಣದೊಳಗೆ ಬರಲಿ, ನರೇಗಲ್ಲನಲ್ಲಿ ಪ್ರಯಾಣಿಕರಿಂದ ದಿಢೀರ ಪ್ರತಿಭಟನೆ

13 Nrgl1- bus
Published on

ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದೊಳಗೆ ಬಸ್​ಗಳು ಬಾರದೇ ನೇರವಾಗಿ ಗಜೇಂದ್ರಗಡ- ಗದಗ ಕಡೆಗೆ ಹೋಗುತ್ತಿರುವ ಕಾರಣ ಜನರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಬಸ್ ತಡೆದು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಈ ಮೊದಲಿನಂತೆ ಎಲ್ಲಾ ವಾಹನಗಳನ್ನು ನರೇಗಲ್ಲ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತೆ ಆಗ್ರಹಿಸಿದರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ ಮಾತನಾಡಿ, ಶೇ 90ರಷ್ಟು ಜನರು ಸಾರಿಗೆ ವಾಹನಗಳ ಮೇಲೆ ಅವಲಂಬನೆಯಾಗಿದ್ದಾರೆ. ಈಗ ತಡೆರಹಿತ ಸಂಚಾರದ ಮೂಲಕ ಜನರು ಪರದಾಡುವಂತೆ ಮಾಡುತ್ತಿದ್ದಾರೆ ಎಂದರು.

ಈ ಮೊದಲು ಹೀಗೆ ಘಟನೆ ನಡೆದಾಗ ಗದಗ ಸಾರಿಗೆ ಡಿಸಿ, ಘಟಕ ವ್ಯಪಸ್ಥಾಪಕರಿಗೆ ಮನವಿ ಕೊಟ್ಟಿದ್ದೇವೆ ಹಾಗೂ ರೋಣ ಶಾಸಕರು ಸಹ ಜನರಿಗೆ ತೊಂದರಗೆಯಾಗದಂತೆ ಬಸ್​ಗಳನ್ನು ಬಿಡಲು ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯರು ಫೋನ್ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿದರು. ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ನಂತರ ವಾಹನಗಳ ಸಂಚಾರಕ್ಕೆ ಜನರು ಅನುವು ಮಾಡಿಕೊಟ್ಟರು.

ಮುಖಂಡ ನಿಂಗನಗೌಡ ಲಕ್ಕನಗೌಡ್ರ, ಶಿವು ಕೊಪ್ಪದ, ರಮೇಶ ಪಲ್ಲೇದ, ಶಿವು ಮುಳಗುಂದ, ರವಿ ಮಣ್ಣೊಡ್ಡರ, ಮನು ರಾಯಬಾಗಿ, ನಾಗನಗೌಡ್ರು ನಾಡಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net