ಅಪಘಾತ: ಕೂದಲೆಳೆ ಅಂತರದಲ್ಲಿ ಬಚಾವಾದ ಪ್ರಯಾಣಿಕರು!

YALLAPUR BUS ACCIDENT
Published on

ಯಲ್ಲಾಪುರ: ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

ಖಾಸಗಿ ಬಸ್ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿತ್ತು. ಅರಬೈಲ್ ಘಟ್ಟದ ಯೂ ಟರ್ನ್ ಬಳಿ ಲಾರಿ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಪಲ್ಟಿಯಾಗಿವೆ.

ಬಸ್ ಹೆದ್ದಾರಿಯಲ್ಲಿ ಪಲ್ಟಿಯಾದರೆ, ಲಾರಿ ಹೆದ್ದಾರಿಯಲ್ಲಿ ಪಲ್ಟಿಯಾಗಿ ಪ್ರಪಾತದತ್ತ ಮುಖ ಮಾಡಿದೆ. ಲಾರಿಯ ಹಿಂಭಾಗ ಮಾತ್ರ ಹೆದ್ದಾರಿ ಮೇಲಿದ್ದು, ಮುಂಭಾಗ ಪ್ರಪಾತದತ್ತ ವಾಲಿದೆ.

ಬಸ್​ನಲ್ಲಿದ್ದ 25 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳು ಪಕ್ಕದ ಪ್ರಪಾತದಲ್ಲಿ ಬಿದ್ದರೆ ನೂರಾರು ಅಡಿಗಳಷ್ಟು ಕೆಳಕ್ಕೆ ಹೋಗುವುದಲ್ಲದೇ, ಸಾವು ನೋವು ಉಂಟಾಗುತ್ತಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪಲ್ಟಿಯಾದ ವಾಹನಗಳನ್ನು ಮೇಲಕ್ಕೆತ್ತಲು ಕ್ರಮ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net