ಪ್ರಯಾಣಿಕನ ಜೀವ ಉಳಿಸಿದ ರೈಲ್ವೇ ಪೊಲೀಸ್

IMG_20230326_124806.jpg
Published on

ಹೊಸಪೇಟೆ: ನಗರದ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸುವ ಮೂಲಕ ರೈಲ್ವೇ ಪೇದೆಯೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ.
ಕಳೆದ ಗುರುವಾರ ಸಂಜೆ 7.32 ರ ಸುಮಾರಿಗೆ ರೈಲು ಸಂಖ್ಯೆ 07335 ಬೆಳಗಾವಿ-ಸಿಕಂದ್ರಬಾದ್ ಎಕ್ಸ್‌ಪ್ರೆಸ್‌ ರೈಲುಗಾಡಿಯಿಂದ‌ ಬೀಳುತ್ತಿದ್ದ ವಿಜಯವಾಡ ನಿವಾಸಿ ನರಸಿಂಹ ಎಂಬುವರನ್ನು ಎಎಸ್ ಐ ಗುರುರಾಜ್, ಮುಖ್ಯ ಪೇದೆ ಸಂತೋಷ್ ರಾಠೋಡ್ ರಕ್ಷಿಸಿದ್ದಾರೆ.
ವಿಜಯವಾಡದಿಂದ ಗದಗಿನತ್ತ ಪ್ರಯಾಣಿಸುತ್ತಿದ್ದ ನರಸಿಂಹ, ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಶೌಚಕ್ಕೆ ತೆರಳಲು ಶುಲ್ಕ ನೀಡಬೇಕೆಂಬ ವಿಚಾರವಾಗಿ ವಾಗ್ವಾದ ನಡೆಸಿ, ನಿಂತಿದ್ದ ರೈಲಿನಲ್ಲಿ ಶೌಚಕ್ಕೆ ತೆರಳಿದ್ದ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ವೇಗ ಪಡೆದ ರೈಲಿನಿಂದ ಇಳಿಯಲು ಯತ್ನಿಸಿ, ಚಕ್ರಕ್ಕೆ ಸಿಲುಕುತ್ತಿದ್ದರು. ಇದೇ ವೇಳೆ ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ರೈಲ್ವೆ ಪೊಲೀಸರು ತಕ್ಷಣ ರಕ್ಷಣೆಗೆ ದಾವಿಸಿ, ಜೀವ ಉಳಿಸಿದ್ದಾರೆ. ಹೊಸಪೇಟೆ ರೈಲ್ವೇ ನಿಲ್ದಾಣದ ಸಿಸಿಟಿವಿಯಲ್ಲಿ‌ ಘಟನೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net