ಸರ್ಕಾರಿ ಬಸ್ ಪಲ್ಟಿ ಪ್ರಯಾಣಿಕನ ಕಾಲು ಮುರಿತ, 15 ಜನರಿಗೆ ಸಣ್ಣಪುಟ್ಟ ಗಾಯ

raichur
raichur
Published on

ರಾಯಚೂರು ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ಶುಕ್ರವಾರ ಬೆಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಾಯಚೂರಿನ ಮೂರನೇ ಘಟಕದ ಬಸ್ ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸ್ಲೀಪಸ್ ಕೋಚ್ ಬಸ್ (ಕೆಆರ್36 ಎಫ್1320) ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಸ್ಥಳಕ್ಕೆ ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದಾವಿಸಿ ಬಸ್‌ನಲ್ಲಿ ಕಾಲುಸಿಲುಕಿ ನೋವಿನಿಂದ ಒದ್ದಾಡಿದ ಪ್ರಯಾಣಿಕ ವಿಶ್ವನಾಥ್‌ನನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಟಿ ಜಿಟಿ ಮಳೆಯಲ್ಲೇ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದ್ದು ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ರಾಯಚೂರು ಗ್ರಾಮೀಣ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net