ಪ್ರಯಾಣಿಕರಿಗೆ ಕುಡಿವ ನೀರು ಸೌಲಭ್ಯ ಕಲ್ಪಿಸಿ

060522 Kudligi Construction Workers' Taluk Association appeal
ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಟಿ.ಜಗದೀಶ್‌ಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ತಾಲೂಕು ಸಂಘ ಶುಕ್ರವಾರ ಮನವಿ ಪತ್ರ ಸಲ್ಲಿಸಿತು.
Published on

ಕೂಡ್ಲಿಗಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿವ ನೀರು ಒದಗಿಸಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್‌ಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ತಾಲೂಕು ಸಂಘದ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಾರಿಗೆ ಬಸ್ ನಿಲ್ದಾಣದಲ್ಲಿ ಈಗಾಗಲೇ ಕುಡಿವ ನೀರಿನ ತೊಟ್ಟಿ ಇದ್ದು, ಇದನ್ನ ನಿರ್ಮಿಸಿ ತುಂಬಾ ವರ್ಷಗಳು ಕಳೆದರೂ ಇದು ನಿರುಪಯುಕ್ತವಾಗಿದೆ. ಸಾರ್ವಜನಿಕರ ಹಣ ಪೋಲಾಗುವ ಜತೆಗೆ ಸಾರ್ವಜನಿಕರಿಗೆ ಕುಡಿವ ನೀರು ಸಹ ಇಲ್ಲದೆ ಪರಿತಪಿಸುವಂತಾಗಿದೆ. ಬೇಸಿಗೆ ಸಮಯದಲ್ಲಿ ನೀರಿನ ದಾಹ ತೀರಿಸಲು ತಾತ್ಕಾಲಿಕವಾಗಿ ನೀರಿನ ಅರವಟಿಗೆ ಒದಗಿಸಬೇಕು. ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ನೀರಿನ ತೊಟ್ಟಿಯ ಅನುಕೂಲವನ್ನು ಸಾರ್ವಜನಿಕರಿಗೆ ಕಲ್ಪಿಸಬೇಕು. ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕಟ್ಟಡ ಕಾರ್ಮಿಕರ ಜಿಲ್ಲಾ ಖಜಾಂಚಿ ಗುನ್ನಳ್ಳಿ ರಾಘವೇಂದ್ರ, ಎನ್.ನಾಗೇಶ, ಎಚ್.ರುದ್ರಪ್ಪ, ಕೆ.ಶ್ರೀನಿವಾಸ, ಪೀರಾಸಾಬ್, ನಭಿ, ಅಬ್ದುಲ್, ರೋಷನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net