

ಇಳಕಲ್ಲ (ಗ್ರಾ): ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಬಸ್‌ಗಾಗಿ ಕಾಯುತ್ತ ಕುಳಿತ ಪ್ರಯಾಣಿಕರತ್ತ ಬಸ್ ನುಗ್ಗಿದೆ.
ಇಳಕಲ್ಲನಿಂದ ವಿಜಯಪುರದತ್ತ ಹೊರಟಿದ್ದ ಸ್ಥಳೀಯ ಘಟಕದ ಬಸ್ ಅನ್ನು ಚಾಲಕ ಪ್ಲಾಟ್‌ಾರ್ಮ್‌ಗೆ ತರುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರತ್ತ ನುಗ್ಗಿದೆ. ಬಸ್ ತಮ್ಮತ್ತ ಬರುತ್ತಿರುವುದನ್ನು ಗಮನಿಸಿದ ಮಹಿಳೆಯರು ದೂರ ಓಡಿರುವುದರಿಂದ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ.