ನಿರ್ವಾಹಕಗೆ ಥಳಿಸಿದ ಪ್ರಯಾಣಿಕನ ಬಂಧನ

crime
Published on

ಹುಬ್ಬಳ್ಳಿ: ಟಿಕೆಟ್ ನೀಡುವ ವಿಚಾರಕ್ಕೆ ಪ್ರಯಾಣಿಕನೊಬ್ಬ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಣಕಲ್‌ನ ಸಂತೋಷಕುಮಾರ ಹೆಬ್ಬಳ್ಳಿ ಬಂಧಿತ. ಶುಕ್ರವಾರ ಸಂಜೆ ನಗರದ ಸಿಬಿಟಿಯಿಂದ ಗಾಮನಗಟ್ಟಿಗೆ ಬಸ್ ಚಲಿಸುತ್ತಿತ್ತು. ಉಣಕಲ್ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ಈ ವ್ಯಕ್ತಿ ಓಂಶಾಂತಿ ಆಶ್ರಮಕ್ಕೆ ಟಿಕೆಟ್ ತೆಗೆದುಕೊಂಡಿದ್ದಾನೆ. ಸ್ಟೇಜ್ ಪ್ರಕಾರ ನಿರ್ವಾಹಕ ಟಿಕೆಟ್ ಕೊಟ್ಟಿದ್ದಾರೆ. ಗಾನಮನಗಟ್ಟಿ ಎಂದು ಟಿಕೆಟ್‌ನಲ್ಲಿ ಮುದ್ರಣವಾಗಿದೆ. ಇದನ್ನು ನೋಡಿದ ಪ್ರಯಾಣಿಕ ನಾನು ಕೇಳಿದ್ದು ಸ್ಥಳ ಬೇರೆ ಟಿಕೆಟ್ ಕೊಟ್ಟಿದ್ದು ಬೇರೆ ಸ್ಥಳದ್ದು ಎಂದು ಪ್ರಶ್ನೆ ಮಾಡಿದ್ದಾನೆ. ಅಲ್ಲದೇ ಟಿಕೆಟ್ ಯಂತ್ರ ಕಸಿದುಕೊಂಡು ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿರುವ ಕಂಡಕ್ಟರ್ ಇಸ್ಮಾಯಿಲ್ ಹಂಚಿನಮನಿ ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಆಧರಿಸಿ ಸಂತೋಷನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net