ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣ

Published on

ಕುಶಾಲನಗರ:: ಕೊಡಗು ಸೈನಿಕ ಶಾಲೆಯ 12ನೇ ತರಗತಿಯ 60 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 2024ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 31.67ರಷ್ಟು ಸಾಧನೆ ಮಾಡಿದಂತಾಗಿದೆ. ಇದು ಶಾಲೆಯಲ್ಲಿ ಒದಗಿಸಲಾದ ಧನಾತ್ಮಕ ಮತ್ತು ಪ್ರೇರಣಾದಾಯಕ ಶೈಕ್ಷಣಿಕ ವಾತಾವರಣದ ಪ್ರತಿಬಿಂಬಿ ಎಂದು ಅವರು ಹೇಳಿದ್ದಾರೆ.

ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಹೊಂದಿದ್ದು, ಎಸ್‌ಎಸ್‌ಬಿ ಸಂದರ್ಶನಕ್ಕೆ ಹಾಜರಾಗಿ ಯಶಸ್ಸು ಪಡೆದ ನಂತರ, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಎಜಿಮಲ(ಕೇರಳ)ದ ಇಂಡಿಯನ್ ನೇವಲ್ ಅಕಾಡೆಮಿಗೆ ಸೇರಿ, ತಮ್ಮ ತರಬೇತಿಯ ನಂತರ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಮಿಷನ್ಡ್ ಅಧಿಕಾರಿಯಾಗುತ್ತಾರೆ. ಕೊಡಗು ಸೈನಿಕ ಶಾಲೆ ಭಾರತೀಯ ಸಶಸ್ತ್ರ ಪಡೆಗಳ ವಿವಿಧ ತರಬೇತಿ ಅಕಾಡೆಮಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net