

ಕಂಪ್ಲಿ: ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕೆಂದು ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಂಥಾಲಯ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ವಿದ್ಯಾರ್ಥಿಗಳು ಸಮಯದ ಸದುಪಯೋಗಪಡಿಸಿಕೊಳ್ಳುವ ಕೌಶಲ ಬೆಳೆಸಿಕೊಳ್ಳಬೇಕು. ಕಾಲಹರಣ ಮಾಡುವ ಬದಲಿಗೆ ಗ್ರಂಥಾಲಯವನ್ನು ಓದಿಗೆ ಬಳಸಿಕೊಳ್ಳುವಂತೆ ಹೇಳಿದರು.
ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ ಗ್ರಂಥಾಲಯದಲ್ಲಿ ಲಭ್ಯವಿರುವ ಸೇವೆ, ಸೌಲಭ್ಯ ಮತ್ತು ಪುಸ್ತಕಗಳ ಮಾಹಿತಿ ನೀಡಿ, ಅಂಕಗಳಿಕೆ ಜತೆಗೆ ಜ್ಞಾನ ಸಮೃದ್ಧಿಗಾಗಿ ಗ್ರಂಥಾಲಯ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ, ರಾಜ್ಮಾ ಟಿ.ಎಂ.ಆರ್., ಖಲೀಲ್, ಅಧೀಕ್ಷಕಿ ನಾಗಮ್ಮ, ಎಫ್‌ಡಿಎ ಸಿದ್ಧಾರೂಢ ಇತರರಿದ್ದರು.