ನಮ್ಮ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸಿ

IMG20241128205647.jpg
Published on

ಬೆಳಗಾವಿ: ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಿ ಉಳಿಸಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ತಲುಪಿಸುವ ಜವಾಬ್ದಾರಿ ಇಂದಿನ ಯುವಕರು ಹಾಗೂ ಎಲ್ಲ ವಿದ್ಯಾರ್ಥಿಗಳ ಮೇಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ದಾಸಪ್ಪನವರ ಹೇಳಿದರು.

ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹಲಗಾ ಗ್ರಾಮದ ಜೆ.ಆರ್.ದೊಡ್ಡಣ್ಣವರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಗಾವಿ ತಾಲೂಕಿನ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ನೋಡಲ್ ಅಧಿಕಾರಿ ಶಂಕರ ತಾರಾಪುರ ಮಾತನಾಡಿ, 2014-15ನೇ ಸಾಲಿನಿಂದ ಕರ್ನಾಟಕದ ಪ್ರಮುಖ ಸ್ಮಾರಕಗಳು, ಕಲೆ ಮತ್ತು ವಾಸ್ತು ಶಿಲ್ಪ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇಂದಿನವರೆಗೆ ನಿರಂತರವಾಗಿ ನಡೆದಿದೆ. ಕರ್ನಾಟಕದ ಪ್ರಾಚೀನ ಸ್ಮಾರಕಗಳ ಇತಿಹಾಸ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟು ಅದನ್ನು ಬಳುವಳಿಯಾಗಿ ಮುಂದಿನವರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೊಯ್ಸಳರ ಕಾಲದ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಗೆ ಅವರು ಕೊಟ್ಟ ಅತ್ಯುನ್ನತ ಕೊಡುಗೆ ನಮ್ಮೆಲ್ಲರಲ್ಲೂ ಇಂದಿಗೂ ಹೆಮ್ಮೆಯುಂಟು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ಬಾಹುಬಲಿ ಕಡೆಮನಿ, ಮುಖ್ಯ ಶಿಕ್ಷಕಿ ನಳಿನಿ ಪಾಟೀಲ, ಎಸ್.ಎಲ್. ಅಳಗೊಂಡ, ಸುನಿತಾ ಚಕ್ಕಣ್ಣವರ, ಬಸಪ್ಪ ಅಡಿವೇರ, ಪ್ರವೀಣಾ ಕೆ.ಎಸ್., ಗಂಗಾದೇವಿ ಚಕ್ರಸಾಲಿ, ಶೈಲಾ ಯಳಮಲಿ ಇದ್ದರು.

ಶಂಕರ ತಾರಾಪುರ ಸ್ವಾಗತಿಸಿದರು. ಸುನೀತಾ ಜಕ್ಕಣ್ಣವರ ನಿರೂಪಿಸಿದರು. ಎಸ್.ಎಲ್. ಅಳಗೊಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net