ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸಿ

22 cmy 2
Published on

ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ನಾಸ ಸುಧಾರಸ ಸಾಂಸ್ಕೃತಿಕ ಕಾರ್ಯಕ್ರಮ

ಚಿಂತಾಮಣಿ: ತಾಲೂಕಿನ ಶ್ರೀತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ನಾದ ಸುಧಾರಸ ಸಾಂಸತಿಕ ವೇದಿಕೆಯಡಿಯಲ್ಲಿ ಮೈಸೂರಿನ ವಿದ್ವಾನ್​ ಸುಮಂತ್​ ಮಂಜುನಾಥ್​ ಹಾಗೂ ವಿದುಷಿ ಮಾಳವಿ ಮಂಜುನಾಥ್​ ಅವರಿಂದ ಪಿಟೀಲು ಸೋಲೋ ವಾದನ ನಡೆಯಿತು.

ಹಲವಾರು ತ್ಯಾಗರಾಜ ಸ್ವಾಮಿಗಳ, ಕೈವಾರ ತಾತಯ್ಯನವರ, ಇನ್ನೂ ಹಲವಾರು ಕೀರ್ತನೆಗಳನ್ನು ಪಿಟೀಲಿನಲ್ಲಿ ನುಡಿಸಿ ಕೇಳುಗರ ಮನಸೂರೆಗೊಳಿಸಿದರು. ಇವರಿಗೆ ಪಕ್ಕ ವಾದ್ಯದಲ್ಲಿ ವಿದ್ವಾನ್​ ಅದಮ್ಯ ಮೃದಂಗದಲ್ಲಿ, ವಿದ್ವಾನ್​ ಕಾರ್ತೀಕ್​ ಖಂಜಿರದಲ್ಲಿ ಸಹಕರಿಸಿದರು.

ಶ್ರೀಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್​ ಮಾತನಾಡಿ, ಸಂಗೀತ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಗೀತವನ್ನು ಅಭ್ಯಾಸ ಮಾಡುವವರ ಬುದ್ಧಿಮತ್ತೆ ಉತ್ತಮವಾಗಿರುತ್ತದೆ.

ಸಂಗೀತವು ಗಣಿತಶಾಸ ಒಳಗೊಂಡಿದೆ ಎಂದರು.

ಡಾ.ಮೈಸೂರು ಮಂಜುನಾಥ್​ ಮಾತನಾಡಿ, ನಮ್ಮ ನಾಡಿನ ಸಾಂಸತಿಕ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. ಶ್ರೀಯೋಗಿನಾರೇಯಣ ಮಠವು ಕಲೆ, ಸಂಗೀತ, ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡುತ್ತಿದೆ.ಇಲ್ಲಿ ಪ್ರತಿವರ್ಷ ನಡೆಯುವ ಗುರುಪೂಜೆ ಸಂಗೀತೋತ್ಸವವು ಹಲವಾರು ಕಲಾವಿದರಿಗೆ ಉತ್ತಮ ವೇದಿಕೆಯಾಗಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ ಎಂದರು.

ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ನಾದಸುಧಾರಸ ವೇದಿಕೆಯಲ್ಲಿ ಕನಕದಾಸರು, ಪುರಂದರ ದಾಸರು ಮತ್ತು ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಕೀರ್ತನೆಗಳ ಗಾಯನವನ್ನು ಏರ್ಪಡಿಸಲಾಗಿದೆ. ೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್​. ಜಯರಾಮ್​, ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್​.ಪಿ.ಎಂ.ಸತ್ಯನಾರಾಯಣ್​, ಸದಸ್ಯರಾದ ಗಣೇಶ್​ ಚಂದ್ರಪ್ಪ, ಕೆ.ವಿ.ಸುರೇಶ್​, ಮೈಸೂರಿನ ಸುಮಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net