ಯುವಪೀಳಿಗೆಯನ್ನು ಸನಾತನಿಗಳಾಗಿ ಬೆಳೆಸುವ ಜವಾಬ್ದಾರಿ

udp-17-pejavara sri
Published on

ಉಡುಪಿ: ದೇಶದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದಷ್ಟು ಕಾಲ ರಾಮಮಂದಿರ ಆಚಂದ್ರಾರ್ಕವಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅಪಘಾನಿಸ್ತಾನದಲ್ಲಿ ಬುದ್ಧನಿಗಾದ ಸ್ಥಿತಿಯೇ ಮತ್ತೆ ಮರುಕಳಿಸಬಹುದು. ಹೀಗಾಗಿ ನಮ್ಮ ಮುಂದಿನ ಪೀಳಿಗೆಯನ್ನು ಸನಾತನಿಗಳಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಭಾನುವಾರ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ದೇಶದ ನೈಜ ಇತಿಹಾಸ ತಿಳಿಸದಿದ್ದರೆ ನಾವು ಅಪರಾಧಿಗಳಾಗುತ್ತೇವೆ. ಕಟ್ಟಡ ನಿರ್ಮಾಣಕ್ಕೆ ತೆರೆ ಬಿದ್ದಿದೆ. ಆದರೆ ಕಟ್ಟಡವನ್ನು ಉಳಿಸುವ ಕೆಲಸಕ್ಕೆ ತೆರೆ ಇಲ್ಲ. ಇತಿಹಾಸವನ್ನು ಕಂಡಿದ್ದೇವೆ. ಹೀಗಾಗಿ ಭವಿಷ್ಯದ ದೃಷ್ಟಿಕೋನವೂ ಅಗತ್ಯ ಎಂದರು.

ಪುನರ್​ ನಾಮಕರಣ ಮಾಡಿ
ಸಂಸತಿಯ ಪರಿಚಯ ನಾಮಕರಣದಿಂದಲೇ ಪ್ರಾರಂಭವಾಗಬೇಕು. ಪಾಶ್ಚಾತ್ಯ ಪ್ರಭಾವದಿಂದ ಇತ್ತೀಚೆಗೆ 2&3 ಅಕ್ಷರದ ಹೆಸರು ಟ್ರೆಂಡ್​ ಆಗುತ್ತಿದೆ. ನಮ್ಮ ಪುರಾಣ, ಕಾವ್ಯಗಳು, ಮಹಾಭಾರತ, ರಾಮಾಯಣಗಳಲ್ಲಿ ವಿುಲವಾದ ಹೆಸರುಗಳಿಗೆ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಮಗು ತನ್ನ ಹೆಸರಿನ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತದೆ. ಈ ಮೂಲಕ ಸಂಸತಿಯ ಪರಿಚಯವಾಗುತ್ತದೆ. ಪುನರ್​ ನಾಮಕರಣಕ್ಕೂ ಕಾನೂನಿನಲ್ಲಿ ಅವಕಾಶಗಳಿವೆ ಎಂದು ಶ್ರೀಗಳು ಹೇಳಿದರು.

ಅಭಿನವ ಆಂಜನೇಯ ಬಿರುದು
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅಯೋದ್ಯೆಯ ನೂತನ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠ್ಠಾಪನೆ ಹಾಗೂ ಮಂಡಲ ಪರ್ಯಂತ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಶಾಸೊಕ್ತವಾಗಿ ನೆರವೇರಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಅಭಿನವ ಆಂಜನೇಯ ಬಿರುದು ಪ್ರದಾನ ಮಾಡಿದರು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ವಿದ್ವಾನ್​ ರಾಮನಾಥ ಆಚಾರ್ಯ ಅಭಿನಂದನಾ ಭಿನ್ನವತ್ತಳೆ ವಾಚಿಸಿದರು. ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರುಪತಿ ಭಟ್​ ಪ್ರಸ್ತಾವನೆಗೈದರು. ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿ, ವಾಸುದೇವ ಭಟ್​ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net