

ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಪಾರ್ವತಿ ಸಂಗಮೇಶ್ವರ ಜಾತ್ರೆ ನಿಮಿತ್ತ ಅಾರ ಭಕ್ತರ ಸಮ್ಮುಖದಲ್ಲಿ ಸಂಜೆ ಮಹಾರಥೋತ್ಸವ ನೆರವೇರಿತು. ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಸಂಗಮೇಶ್ವರ ದೇವರಿಗೆ ಅಭಿಷೇಕ, ತೇರಿನ ಪೂಜೆ ನಡೆಯಿತು. ಪಲ್ಲಕ್ಕಿಯು ಕಲಶ, ಕುಂಭ, ಪುರವಂತರ ಸೇವೆಯೊಂದಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಮೆರವಣಿಗೆಯಲ್ಲಿ ಗಂಗಸ್ಥಳದಿಂದ ಆಗಮಿಸಿತು. ಬಳಿಕ ಅರಸನಾಳದಿಂದ ಕಲಶ, ಜಂಗಮುರಾಳ ಗ್ರಾಮದಿಂದ ನಂದಿಕೋಲು, ಆರೇಮುರಾಳ ಗ್ರಾಮದಿಂದ ತೇರಿನ ಮಿಣಿ(ಹಗ್ಗ) ಸಕಲ ವಾದ್ಯ ಸಮೇತ ಆಗಮಿಸಿ ತೇರಿಗೆ ಕಲಶ ಏರಿಸಿದ ಬಳಿಕ ಮಹಾರಥೋತ್ಸವ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನೆರವೇರಿತು.
ಬಳವಾಟದ ಸೋಮಶೇಖರ ದೇವರು, ಊರಿನ ಮುಖಂಡರಾದ ಪ್ರಸನ್ನಕುಮಾರ ಜಹಾಗೀರದಾರ, ನಿವೃತ್ತ ಇಂಜಿನಿಯರ್ ಬಿ.ಬಿ.ಪಾಟೀಲ, ಬಸವಂತ್ರಾಯ ನಾಗರಿತ್ತಿ, ಆದಪ್ಪ ರಾಮೋಡಗಿ, ತಾಪಂ ಮಾಜಿ ಸದಸ್ಯ, ಪಿಕೆಪಿಎಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಗಿರೀಶ ಲಿಂಗದಳ್ಳಿ, ಶಿವು ನಾಡಗೌಡ, ನಿಂಗನಗೌಡ ಬಿರಾದಾರ, ಪ್ರದೀಪ ಚೌತಾಯಿ, ನಾಗರಾಜ ರಾಮೋಡಗಿ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿದ್ದರು. ಮುದ್ದೇಬಿಹಾಳ ಪೊಲೀಸರು ಭದ್ರತೆ ಒದಗಿಸಿದ್ದರು. ರಾತ್ರಿ ಹಾಸ್ಯ, ಸಂಗೀತ ರಸಮಂಜರಿ ನಡೆಯಿತು.