ಬಳ್ಳಾರಿ ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನಿರ್ಧಾರದಿಂದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಉಚ್ಛಾಟನೆಯಾದ ಬಳಿಕ ಅವರೊಂದಿಗೆ ಮಾತನಾಡಿರುವೆ ಕೆಲವೊಂದು ವಿಷಯಗಳನ್ನು ಸಮಯ ಬಂದಾಗ ಬಹಿರಂಗಪಡಿಸುವೆ. ಇತ್ತೀಚೆಗೆ ಪಕ್ಷದಲ್ಲಿನ ಆದ ಬೆಳವಣಿಗಳ ಬಗ್ಗೆ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಮುಂದಿನ ದಿನಗಳಲ್ಲಿ ಸವಿಸ್ತಾರವಾಗಿ ವಿವರಿಸಲಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವವರನ್ನು ಟಾರ್ಗೆಟ್ ಮಾಡುತ್ತಿಲ್ಲ ,ಅತಂಕವೂ ಬೇಡ ಎಂದು ಸ್ಪಷ್ಟನೆ ನೀಡಿದರು.
ಪಕ್ಷದಲ್ಲಿನ ಎಲ್ಲ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ದೊರೆಯಲಿದೆ. ಮಾಜಿ ಶಾಸಕ ಕುಮಾರ ಬಂಗಾರಪ್ಪ ಮನೆಯಲ್ಲಿ ಭಿನ್ನಮತೀಯರ ಬಣ ಸಭೆ ನಡೆಸಿರುವುದರ ಬಗ್ಗೆ ವರಿಷ್ಠರ ಗಮನಕ್ಕೆ ಬಂದಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯಾಧ್ಯಕ್ಷರೇ ನೇರವಾಗಿ ಉತ್ತರ ನೀಡುವರು ಎಂದರು.
ಎಲ್ಲದಕ್ಕೂ ಬೆಲೆ ಏರಿಕೆ ಮಾಡಲಾಗಿದೆ : ರಾಜ್ಯ ಸರ್ಕಾರ ಅಧಿಕಾರ ಬಂದ ಕೆಲ ದಿನಗಳಲ್ಲೇ ಎಲ್ಲ ವಸ್ತುಗಳಿಗೆ ಬೆಲೆ ಏರಿಕೆ ಮಾಡಲಾಗಿದೆ. ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು ಮಾತ್ರವಿಲ್ಲ, ಬೆಲೆ ಏರಿಕೆ ಮಾತ್ರ ಖಚಿತವಾಗಿದೆ. ರಾಜ್ಯದ ಜನರೇ ಈ ಸರ್ಕಾರವನ್ನು ಕಿತ್ತು ಎಸಯಲಿದ್ದಾರೆ ಎಂದರು.