ಪಕ್ಷ ಒಪ್ಪಿದರೆ ಉಪ ಸಮರದಲ್ಲಿ ಸ್ಪರ್ಧೆ

25Yargatti-1-Web
ಯರಗಟ್ಟಿ ಪಟ್ಟಣದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಕ್ಷದ ಶಾಲು ಹೊದಿಸಿ, ಸ್ವಾಗತಿಸಿದರು. ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಅಲ್ತಾಫ್ ಮುಲ್ಲಾ, ಈರಣ್ಣ ಸಂಗಪ್ಪನವರ ಇತರರು ಇದ್ದರು.
Published on

ಯರಗಟ್ಟಿ: ಪಕ್ಷ ಅನುಮತಿ ನೀಡಿದರೆ ಎದುರಾಳಿ ಯಾರೇ ಇದ್ದರೂ ನಾನು ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಭೈ ಫೈಟ್‌ನಲ್ಲಿ ನನ್ನ ಸ್ಪರ್ಧೆ ಖಚಿತ. ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಲು ನಾವು ನಿರಂತರ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದೇವೆ. ಬಿಜೆಪಿ ವೈಫಲ್ಯವನ್ನು ಮನೆಮನೆಗೆ ತಲುಪಿಸಬೇಕಾಗಿದೆ. ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು. ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಸೌರಭ ಚೋಪ್ರಾ, ಪಂಚಪ್ಪ ಮಲ್ಲಾಡ, ಫಕೀರಪ್ಪ ಹದ್ದಣ್ಣವರ, ಚಾಯಪ್ಪ ಹುಂಡೇಕರ, ಮಲೀಕಸಾಬ್ ಬಾಗವಾನ್, ಶಿವಾನಂದ ಕರಿಗಣ್ಣವರ, ಸಂತೋಷ ಹಾದಿಮನಿ, ಮಂಜುನಾಥ ತಡಸಲೂರ, ಅಲ್ತಾಫ್ ಮುಲ್ಲಾ, ಈರಣ್ಣ ಸಂಗಪ್ಪನವರ, ಬಂಗಾರಪ್ಪ ಹರಳಿ, ಸಂತೋಷ ಚನ್ನಮೇತ್ರಿ, ಯಶವಂತ ಯಲಿಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net