ಪಾರ್ಟ್​ ಟೈಮ್​ ಜಾಬ್​ ನೀಡುವುದಾಗಿ ವಂಚನೆ

online fraud
Published on

ಉಡುಪಿ: ಪಾರ್ಟ್​ ಟೈಮ್​ ಜಾಬ್​ ನೀಡುವುದಾಗಿ ಯುವತಿಯೊಬ್ಬಳಿಂದ 1.13 ಲಕ್ಷ ರೂ. ಅನ್​ ಲೈನ್​ ಮೂಲಕ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.
ರೀಚಾ ಸಚಾನ (27) ಎಂಬುವವರ ಮೊಬೈಲ್​ಗೆ ಅಪರಿಚಿತ ವ್ಯಕ್ತಿಗಳು ವಾಟ್ಸಪ್​ ಮೂಲಕ ಲಿಂಕ್​ನ್ನು ಕಳುಹಿಸಿ ಆ.20 ರಿಂದ 21ರ ಮಧ್ಯಾವದಿಯಲ್ಲಿ ಒಟ್ಟು 1,13,300 ರೂ. ಹಣವನ್ನು ಆನ್​ ಲೈನ್​ ಮುಖೇನ ಹಂತ ಹಂತವಾಗಿ ಪಡೆದು, ಉದ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net