ಇಡೀ ದಿನ ಬಿಸಿಲು ಸಹಿತ ಅಲ್ಲಲ್ಲಿ ಮೋಡ ಕವಿದ ವಾತಾವರಣ

karavali
Published on

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಮೋಡಕವಿದ ವಾತಾವರಣವಿದ್ದರೂ ಹಗಲು ಹೊತ್ತು ಇಡೀ ದಿನ ಬಿಸಿಲು ಕಂಡುಬಂದಿದೆ.

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಮುಂದಿನ ಒಂದೆರಡು ದಿನ ಸಂಜೆ ಮೋಡ ಕವಿದ ವಾತಾವರಣದೊಂದಿಗೆ ತಡರಾತ್ರಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿತ್ತು. ಆದರೆ ದ.ಕ.ಜಿಲ್ಲೆಯಲ್ಲಿ ಗುರುವಾರ ಮಳೆ ಬಂದಿಲ್ಲ.

ಕರಾವಳಿಯಾದ್ಯಂತ ಮಳೆಯ ವಾತಾವರಣ ದೂರವಾಗಿತ್ತು. ಮುಂಜಾನೆ ಗ್ರಾಮೀಣ ಪ್ರದೇಶದಲ್ಲಿ ಇಬ್ಬನಿ ಮುಸುಕಿದ ವಾತಾವರಣ ಕಂಡುಬಂದಿದೆ. ಹಗಲು ಹೊತ್ತು ಮಂಗಳೂರಲ್ಲಿ ಕೂಡ ಮೋಡ, ಬಿಸಿಲು ಇತ್ತು. ಭಾರಿ ಮೋಡದೊಂದಿಗೆ ಸಾದಾರಣ ಮಳೆಯ ನಿರೀಕ್ಷೆ ಹುಸಿಯಾಗಿತ್ತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ದಿನಗಳಲ್ಲಿ ಒಂದೆರಡು ದಿನಗಳ ಕಾಲ ಸಣ್ಣ ಪ್ರಮಾಣದಲ್ಲಿ ಮಳೆ ಕಾಣಿಸುವ ಮುನ್ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net