ಸೋಲು-ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ

25ckd1
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.3861111, 0.3861111); modeInfo: ; sceneMode: Night; cct_value: 0; AI_Scene: (-1, -1); aec_lux: 82.0; hist255: 0.0; hist252~255: 0.0; hist0~15: 0.0;
Published on

ಚಿಕ್ಕೋಡಿ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಡಿಎಚ್‌ಒ ಡಾ.ಎಸ್.ಎಸ್.ಗಡೇದ ಹೇಳಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ಹಮ್ಮಿಕೊಂಡ ಹೆಲ್ತ್ ಪ್ರೀಮಿಯರ್ ಲೀಗ್-2024- ಸೀಜನ್ 4 ರ ವಿಜೇತ ತಂಡಗಳಿಗೆ ಭಾನುವಾರ ಬಹುಮಾನ ವಿತರಿಸಿ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯವಂತರಾಗಿರಬೇಕೆಂಬ ಉದ್ದೇಶದಿಂದ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೊಳಿಸಿದ್ದಾರೆ ಎಂದರು.

ಅಪರ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯ ಅಧೀಕ್ಷಕ ನವೀನ ಗಂಗರೆಡ್ಡಿ ಮಾತನಾಡಿ, ಕ್ರಿಕೆಟ್, ಬ್ಯಾಡ್ಮಿಂಟನ್ ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಚೇರಿಯಿಂದ ಆಗಾಗ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಜನರಿಗೆ ಉತ್ತಮ ಸೇವೆ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಆರೋಗ್ಯದಿಂದ ಇರಬೇಕೆಂಬುವುದು ಪಂದ್ಯಾವಳಿ ಆಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಎಂಟು ತಾಲೂಕಿನಿಂದ 15 ತಂಡಗಳು ಭಾಗವಹಿಸಿದ್ದವು. ಅಥಣಿಯ ಲೈಫ್ ಸೇವಿಯರ್ಸ್ ತಂಡ ಹಾಗೂ ರಾಯಬಾಗದ ರಾಯಲ್ ರ‌್ಯಾಂಪೇಜ್ ತಂಡ ಫೈನಲ್

ಪ್ರವೇಶಿಸಿದ್ದವು. 6 ಓವರ್‌ಗಳ ಪಂದ್ಯದಲ್ಲಿ ಅಥಣಿ ತಂಡ ವಿಜೇತವಾಗಿದ್ದು, ರಾಯಬಾಗ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಗೆಲುವು ಸಾಧಿಸಿದ ಹಾಗೂ ರನ್ನರ್ ಅಪ್ ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.

ಬಸಗೌಡ ಕಾಗೆ, ಡಾ.ಸಂತೋಷ ಕುನ್ನೂರಿ, ಡಾ.ಶಾಂತಾರಾಮ ಬಾಗೇವಾಡಿ, ನವೀನ ಗಂಗರೆಡ್ಡಿ, ಜಗದೀಶ ಗಣಾಚಾರಿ, ಬಿ.ಎ. ಕುಂಬಾರ, ಜಿ.ಜಿ.ಕುಲಕರ್ಣಿ, ಸಂತೋಷ ತಾವದಾರೆ, ರಾಜು ದತ್ತವಾಡೆ, ಚಿದಾನಂದ ಕಲಾದಗಿಮಠ, ಜಗದೀಶ ಹುಲಕುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net