ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ

27 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ರಾಷ್ಟ್ರೀಯ ಕ್ರೀಡಾಪಟು ರಾಜಶ್ರೀ ತಾರಿಹಾಳ ಹೇಳಿದರು.

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ರಾಜೀವ ಗಾಂಧಿ ವಿದ್ಯಾಲಯ ಸಿಬಿಎಸ್​ಇ ಶಾಲೆ ಮೈದಾನದಲ್ಲಿ ಹು-ಧಾ ಸಹೋದಯ ಅಡಿ ಬುಧವಾರ ಏರ್ಪಡಿಸಿದ್ದ 14ವರ್ಷದೊಳಗಿನ ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ರಾಘವೇಂದ್ರ ತವನಪ್ಪನವರ ಪಂದ್ಯಾವಳಿಗೆ ಚಾಲನೆ ನೀಡಿದರು. ಸಹೋದಯದ ವ್ಯಾಪ್ತಿಯ 9 ಶಾಲೆಗಳ ತಂಡಗಳು ಭಾಗವಹಿಸಿದ್ದವು. ಗದಗ ಜಿಲ್ಲೆಯ ಜೆಟಿ ಶಾಲೆ ತಂಡ ಪ್ರಥಮ ಸ್ಥಾನ ಪಡೆದರೆ, ಗದಗ ಜಿಲ್ಲೆಯ ಪಾರ್ಶ್ವನಾಥ ಶಾಲೆ ದ್ವೀತಿಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಬಹುಮಾನ ವಿತರಿಸಿದರು.

ರಾಜೀವ್​ ಗಾಂಧಿ ವಿದ್ಯಾಲಯ ಸಿಬಿಎಸ್​ಇ ಶಾಲೆ ಅಧ್ಯಕ್ಷ ಬಸವರಾಜ ತಾಳಿಕೋಟಿ, ಸಭಾದ ಕೋಶಾಧ್ಯಕ್ಷ ಜಗದೀಶ ಮಳಗಿ, ಕಾರ್ಯದರ್ಶಿ ರಾಧಾಕೃಷ್ಣನ್​, ಪ್ರಾಚಾರ್ಯೆ ಸುರೇಖಾ ಚಾಂದಗುಡೆ, ಉಪ ಪ್ರಾಂಶುಪಾಲರು, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net