ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ

h19-mahaveera
Published on

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಶಹರ ಬಿಇಒ ಕಚೇರಿ ವತಿಯಿಂದ ಇಲ್ಲಿನ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಇ-ಗ್ರೂಪ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ, ಕ್ರೀಡಾಕೂಟದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಭಾಗವಹಿಸುವುದು ಮುಖ್ಯ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಮೀಸಲಾತಿ ನಿಗದಿಪಡಿಸಲಾಗಿದೆ. ಇವುಗಳ ಪ್ರಯೋಜನ ಪಡೆಯಬೇಕು ಎಂದರು.

ಹುಬ್ಬಳ್ಳಿ ಶಹರ ವಲಯದ 22 ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಧನಪಾಲ ಮುನ್ನೊಳ್ಳಿ, ಎಸ್.ಬಿ. ಹಿರೇಮಠ, ಪಿ.ಎಚ್. ನದಾಫ್, ಎಂ.ವಿ. ಜಕಾತಿ, ಚಂದ್ರು ಶಲವಡಿ, ಗಂಗಮ್ಮ ಹಿರೇಮಠ, ಕುಸುಮಾ ದೇಸಾಯಿ, ರಾಜಶ್ರೀ ವರ್ಣೆಕರ, ಸುಮಾ ನೆಗಿನಹಾಳ, ಪೂಜಾ ದೇವಳೆ, ಮಹೇಶ ಪೂಜಾರ, ಗಣೇಶ ಮುಶಣ್ಣವರ, ಸುಧೀರ ಕಡಬಿ ಇತರರಿದ್ದರು. ಮೆಹರ ಮುಲ್ಲಾ ವಂದಿಸಿದರು. ದೀಪಾ ಪತ್ರಾವಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net