ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಆಧ್ಯಾತ್ಮಿಕವಾಗಿ ಲಾಭ

Published on

ವಿಜಯಪುರ: ಮಕ್ಕಳು ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಆಧ್ಯಾತ್ಮಿಕವಾಗಿ ಲಾಭ ಕೊಡಲಿದೆ. ಅಲ್ಲದೆ, ಉತ್ತಮ ಜೀವನ ನಿರ್ವಹಣೆಗೆ ಅದು ಸಹಕಾರಿಯಾಗಲಿದೆ ಎಂದು ಪಂಡಿತ ಪವನ ಆಚಾರ್ಯ ಹೇಳಿದರು.

ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಒಂದು ವಾರ ನಡೆದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.

ಪಂ. ಆಂಜನೇಯ ಆಚಾರ್ಯ ಮತ್ತು ವಾಸುದೇವ ಆಚಾರ್ಯ ಮಾತನಾಡಿ, ಪ್ರತಿವರ್ಷ ನಡೆಯುವ ಶಿಬಿರದಲ್ಲಿ ಭಾಗವಹಿಸುವವರ ಸಂಖ್ಯೆ ಅಧಿಕವಾಗುತ್ತಲೆ ಇರುವುದು ಸಂತಸದ ವಿಷಯ ಎಂದರು.

ಶಿಬಿರದಲ್ಲಿ 5 ವರ್ಷದ (ಬಾಲಕ &ಬಾಲಕಿ) ಮಕ್ಕಳಿಂದ 80 ವರ್ಷದ ಎಲ್ಲ ವಿಪ್ರ ಪುರುಷ ಮತ್ತು ಸಿಯರಿಗೆ ಧಾರ್ಮಿಕ ಹಾಗೂ ಸಾಂಸತಿಕ ವಿಷಯಗಳ ಕುರಿತು ಬೋಧಿಸಲಾಯಿತು. ಮಕ್ಕಳಿಗೆ ಸಂಧ್ಯಾವಂದನೆ, ಹಿರಿಯರಿಗೆ ದೇವರ ಪೂಜೆ, ಸ್ತೋತ್ರುಗಳು ಹಾಗೂ ಮಹಿಳೆಯರಿಗೆ ಸಿಧರ್ಮದ ಪಾಠ ಹೇಳಿಕೊಡಲಾಯಿತು. ಶಿಬಿರಾರ್ಥಿಗಳಿಗೆ ನಿತ್ಯ ಭೋಜನ, ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ವಿ.ಬಿ. ಕುಲಕರ್ಣಿ, ಅಶೋಕ ರಾವ್​, ವಿಕಾಸ ಪದಕಿ, ಕೃಷ್ಣ ಪಡಗಾನೂರ, ಪವನ ಆಚಾರ್ಯ, ಆಂಜನೇಯ ಆಚಾರ್ಯ, ಪವನ ಜೋಶಿ, ಸಮೀರ ಆಚಾರ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net