

ಬೈಲಹೊಂಗಲ: ಮ್ಯಾರಥಾನ್ ದೆಹಿಕ ಶಕ್ತಿಗೆ ಮಾತ್ರವಲ್ಲ, ಮಾನಸಿಕ ವ್ಯಕ್ತಿತ್ವ ವಿಕಸನಕ್ಕೂ ಪ್ರೇರಣೆಯಾಗಿದೆ ಎಂದು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ ಹೇಳಿದರು.
ಪಟ್ಟಣದ ಕೆಆರ್ಸಿಇಎಸ್ ಆಂಗ್ಲ ಮಾಧ್ಯಮ ಶಾಲೆ ಮೆದಾನದಲ್ಲಿ ಆನಿಗೋಳ ಮಾ ಭಾರತಿ ಸೇವಾ ೌಂಡೇಷನ್, ಬೆಲಹೊಂಗಲ ರೋಟರಿ ಕ್ಲಬ್ ಸಹಯೋಗದಲ್ಲಿ ದ್ವೀತಿಯ ಬಾರಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಆಸ್ಟೇಲಿಯನ್ ಐರನ್ಮ್ಯಾನ್ ಡಾ.ಸತೀಶ ಚೌಲಗೇರೆ ಮಾತನಾಡಿದರು. ಪುರುಷರ ವಿಭಾಗದಲ್ಲಿ ಸುನೀಲ ದಂಡಾಯಿ ಪ್ರಥಮ, ಅಸ್ಲಾಂ ನಸ್ಲಾಪುರೆ ದ್ವೀತಿಯ, ಈರಪ್ಪ ಹುಲಗನ್ನವರ ತತೀಯ, ಸಿದ್ದಪ್ಪ ನರಸಣ್ಣವರ ನಾಲ್ಕು , ಬಸಯ್ಯ ಪೂಜೇರ ಐದನೇ ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ನಕೋಶ ಮಂಗನಾಕರ ಪ್ರಥಮ, ಎಸ್.ಆರ್. ಶಾಹಿನ್ ದ್ವೀತಿಯ, ಶೋಭಾ ಕಾಕತಕರ ತೃತೀಯ, ಧನಶ್ರೀ ಪಾಟೀಲ ಚತುರ್ಥ, ನಿಖಿತಾ ಚವ್ಹಾಣ ಐದನೇ ಸ್ಥಾನ ಪಡೆದರು.
ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ವಿ.ಐ. ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಚಿತ್ರನಟ ಶಿವರಂಜನ ಬೋಳಣ್ಣವರ, ಪುರಸಭೆ ಅಧ್ಯ ವಿಜಯ ಬೋಳಣ್ಣವರ, ಸಂಜೀವಗೌಡ ಪಾಟೀಲ, ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ಮಹಾಂತೇಶ ತುರಮರಿ, ೌಂಡೇಷನ್ ಸಂಸ್ಥಾಪಕ ಅಧ್ಯ ಸುನೀಲ ಮರಕುಂಬಿ, ರೋಟರಿ ಕ್ಲಬ್ ಅಧ್ಯ ಮಹಾಂತೇಶ ಜಿಗಜಿನ್ನಿ ಇತರರಿದ್ದರು.