

ರಾಮದುರ್ಗ: ಸತ್ಯ, ಶುದ್ಧ ಕಾಯಕದೊಂದಿಗೆ ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ಜೀವನ ನಡೆಸಲು ಸಾಧ್ಯ. ಕವಲುದಾರಿಯಲ್ಲಿ ನಡೆಯುತ್ತಿರುವ ನಾಗರಿಕರನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ನಾಡಿನ ಸಾಧು, ಸಂತರ ಮೇಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಪ್ಪಲಕಟ್ಟಿ ಗ್ರಾಮದ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಬ್ರಹ್ಮೆಕ್ಯ ಮಹಾದೇವಯ್ಯ ಶ್ರೀಗಳ ಶತಮಾನೋತ್ಸವ, ಡಾ.ಕಲ್ಮೇಶ್ವರ ಶ್ರೀಗಳ ಷಷ್ಟಾ$್ಯಬ್ದಿ ಕಾರ್ಯಕ್ರಮದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧರ್ಮ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜಾತಿ ಆಧಾರಿತ ಸಮಾಜ ನಿರ್ಮಾಣಗೊಳ್ಳುತ್ತಿದೆ. ರಾಜಕೀಯ ಪ್ರೇರಣೆ, ಸಾಮಾಜಿಕ ಪರಿಸರದಿಂದ ನಾಗರಿಕರಲ್ಲಿ ಭಿನ್ನಾಭಿಪ್ರಾಯ ಮೂಡುತ್ತಿವೆ. ಧರ್ಮಕ್ಕಿಂತ ಜಾತಿಯೇ ಮೇಲು ಎನ್ನುವ ಭಾವದಿಂದ ವಿನಾಶ ಉಂಟಾಗಲಿದೆ. ಜಾತಿಗಿಂತ ಧರ್ಮ ದೊಡ್ಡದು ಎಂಬ ಭಾವ ಎಲ್ಲರಲ್ಲೂ ಬರಬೇಕು. ಹಿಂದು ಧರ್ಮ ದೊಡ್ಡ ಸಾಗರ ಇದ್ದಂತೆ, ಧರ್ಮ ಎಂದರೆ ತಾನೊಬ್ಬನೆ ಬದುಕುವುದಲ್ಲ. ತನ್ನೊಂದಿಗೆ ಇತರರನ್ನು ಸೇರಿಸಿಕೊಂಡು ಪ್ರಗತಿಪರ ವಿಚಾರಗಳ ಉದಾತ್ತ ಗುಣ ಬೆಳೆಸಿಕೊಳ್ಳುವುದು. ರಂಭಾಪುರಿ ಜಗದ್ಗುರು ಮಾವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ದೇಶಕ್ಕೆ ಶಾಂತಿ ಎಂಬ ಸಂದೇಶವನ್ನು ಬಹುದಿನಗಳ ಹಿಂದೆಯೇ ರವಾನಿಸಿದ್ದಾರೆ. ನಾಡಿನ ಜನತೆ ಅಂತಹ ಸಂಸತಿ ಮೆಗೂಡಿಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಠಗಳ ಗುರುಗಳು ಹಾಗೂ ಜನತೆಯ ಮಧ್ಯೆ ತಾಯಿ&ಮಕ್ಕಳ ಸಂಬಂಧವಿರುತ್ತದೆ. ಧರ್ಮ ರಣೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲಿದೆ. ಹಿಂದೆ 1972ರಲ್ಲಿ ಸರ್ಕಾರ ಹಾವನೂರ ಆಯೋಗದಿಂದ ಒಳಪಂಡಗಳ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಿದೆ. ದಾವಣಗೇರಿಯಲ್ಲಿ ಜು.21 ಮತ್ತು 22 ರಂದು ನಡೆಯಲಿರುವ ಪೀಠಾಚಾರ್ಯ&ಶಿವಾಚಾರ್ಯರ ಶಂಗ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ ಮಾತನಾಡಿ, ಟಿವಿ, ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಮಕ್ಕಳಿಗೆ ಧರ್ಮ ಸಂಸತಿಯ ಬೋಧನೆ ಮಾಡುವುದನ್ನು ಮರೆಯುತ್ತಿದ್ದೇವೆ. ಮಕ್ಕಳನ್ನು ಮಠ&ಮಂದಿರಗಳಿಗೆ ಕಳಿಸುವ, ಧರ್ಮ ಸಂಸತಿಯ ಮಾರ್ಗದರ್ಶನ ನೀಡಿ, ಗುರುಕುಲಗಳಲ್ಲಿ ಮಕ್ಕಳನ್ನು ಅಧ್ಯಯನಕ್ಕೆ ಬಿಡುವ ಪರಿಪಾಠ ಬೆಳೆಸಿಕೊಂಡಲ್ಲಿ ಸುಸಂಸತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯರು, ಹರ್ಲಾಪುರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚಿಪ್ಪಲಕಟ್ಟಿ ಮಠದ ಡಾ. ಕಲ್ಮೇಶ್ವರ ಸ್ವಾಮೀಜಿ ಷಷ್ಟ$್ಯಬ್ದಿ ಕಾರ್ಯಕ್ರಮ ಆಚರಿಸಿ, 60 ಪರಮಪೂಜ್ಯರ ಪಾದಪೂಜೆ, 60 ಮಾಜಿ ಸೈನಿಕರು, 60 ರೈತರು ಸೇರಿ ಹಲವು ಸಾಧಕರನ್ನು ಸತ್ಕರಿಸಿದರು. ಚಿಪ್ಪಲಕಟ್ಟಿ ಜ್ಯೋತಿ, ದೆವಿ ವರವು, ಬಾಳಿಗೆ ಬೆಳಕು ಮತ್ತು ವಚನ ಸಿರಿ ಎಂಬ ನಾಲ್ಕು ಪುಸ್ತಕಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು.