ಶಿಸ್ತಮುಡಿ ಭಾಗಿ ಸೀಮಾ ಸಮಾವೇಶ

YLP SEEMA
Published on

ಯಲ್ಲಾಪುರ: ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಹವ್ಯಕ ಜಾಗೃತಿ ಕಾರ್ಯಪಡೆ, ಸೀಮಾ ವೈದಿಕ ಪರಿಷತ್ತು, ಸೀಮಾ ಪರಿಷತ್ತು, ದೇವಾಲಯದ ವತಿಯಿಂದ ಶಿಸ್ತಮುಡಿ ಭಾಗಿ ಸೀಮಾ ಸಮಾವೇಶ ಆಯೋಜನೆಗೊಂಡಿತ್ತು.

ವಾಸುದೇವ ಜಪ, ಹವನ, ಗುರುಪಾದುಕಾ ಪೂಜೆ, ಹವ್ಯಕ ಸಂಘಟನೆಯ ಬಗ್ಗೆ ಉಪನ್ಯಾಸ, ಚಿಂತನಾ ಗೋಷ್ಠಿಗಳು, ಮಾತೆಯರಿಂದ ವಿಷ್ಣು ಸಹಸ್ರನಾಮ ಪಠಣ, ಭಗವದ್ಗೀತಾ ಪಠಣಗಳು ನಡೆದವು.

ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಹಿರಿಯ ಪುರೋಹಿತರಾದ ವೇ.ತಿಮ್ಮಣ್ಣ ಭಟ್ಟ ನಾಳಶೇರು ಅವರನ್ನು ಸನ್ಮಾನಿಸಿ, ಆಶೀರ್ವದಿಸಿದರು.

ಹವ್ಯಕ ಜಾಗೃತಿ ಕಾರ್ಯಪಡೆಯ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ, ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ವೈದಿಕ ಪರಿಷತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಪ್ರಮುಖರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಡಾ.ಶಂಕರ ಭಟ್ಟ ಬಾಲಿಗದ್ದೆ, ಗಣಪತಿ ಮಾನಿಗದ್ದೆ ಇತರರಿದ್ದರು. ಲಕ್ಷ್ಮೀನಾರಾಯಣ ಗುಮ್ಮಾನಿ ಹಾಗೂ ಶಶಿಕಾಂತ ಭಟ್ಟ ವೇದ ಘೊಷ ಮಾಡಿದರು. ಮಹೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net