ಸೋಲು-ಗೆಲುವು ಲೆಕ್ಕಿಸದೆ ಭಾಗವಹಿಸಿ

Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಾತ್ಯಾಯಿನಿ ಮರಡಿಯಲ್ಲಿ ಶ್ರೀ ಹಾಲಸ್ವಾಮಿ ಜಾತ್ರೆ ನಿಮಿತ್ತ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಶ್ರೀ ಹಾಲಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸ್ವಾಮಿಯ ಉತ್ಸವ ಮೂರ್ತಿಯನ್ನೊತ್ತ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಬಡ್ಡಿ ಪಂದ್ಯಾವಳಿಗಳು ನಡೆದವು. ಹಡಗಲಿ ತಾಲೂಕಿನ ನಾಗತಿಬಸಾಪುರ ಶ್ರೀ ಹಾಲಸ್ವಾಮಿ ಮಠದ ಗಿರಿರಾಜ ಹಾಲಸ್ವಾಮಿಗಳು ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಿದರು. ನಂತರ ಮಾತನಾಡಿ, ಯುವಕರಲ್ಲಿ ಆರೋಗ್ಯಕರವಾದ ಹಾಗೂ ಸ್ನೇಹ ಬಾಂಧವ್ಯಕ್ಕಾಗಿ ಇಂತಹ ಪಂದ್ಯಾವಳಿಗಳನ್ನು ಏರ್ಪಡಿಸಬೇಕು. ಸೋಲು-ಗೆಲುವು ಎನ್ನದೆ ಸೌಹಾರ್ದತೆಗಾಗಿ ಆಟಗಳನ್ನಾಡಬೇಕು. ಮೊಬೈಲ್‌ಗೋಳಿಗಿಂತ ದೇಹ ಮತ್ತು ಮನಸು ಸದೃಢತೆಗಾಗಿ ಪಂದ್ಯಾವಳಿಗಳನ್ನು ಏರ್ಪಡಿಸಬೇಕು ಎಂದರು.

ದಾವಣಗೆರೆ ಬಾಯ್ಸ ಮತ್ತು ಕೆಟಿಎಂ ಬಾಯ್ಸಗಳ ತಂಡಗಳ ನಡುವೆ ಫೈನಲ್ ಪಂದ ನಡೆಯಿತು. ದಾವಣಗೆರೆ ಬಾಯ್ಸನವರ ತಂಡ ಗೆಲುವು ಸಾಧಿಸಿತು.

ಗ್ರಾಪಂಯ ಸದಸ್ಯರಾದ ರಾಜೀವ, ಪ್ರಮುಖರಾದ ರಾಜಕುಮಾರ, ನಿವೃತ್ತ ಸೈನಿಕ ಬಸವರಾಜಯ್ಯ, ಚಂದ್ರಪ್ಪ, ಕೆ.ಕೆ.ಬಿ.ಎಂ.ಶಶಿಧರ, ಇಟ್ಟಿಗಿ ಮಲ್ಲಿಕಾರ್ಜುನ, ಭೀಮಣ್ಣ, ಯಳಕಪ್ಪ, ಚೆನ್ನಕೇಶವ, ಮಲ್ಲೇಶ, ಕಿರಣಕುಮಾರ, ಶ್ರೀನಿವಾಸ, ಚಿಕ್ಕವೀರಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net