

ಹಗರಿಬೊಮ್ಮನಹಳ್ಳಿ: ಸೋಲು ಗೆಲುವಿನಿಂದ ವಿಚಲಿತರಾಗದೆ ಕ್ರೀಡಾಕೂಟದಲ್ಲಿ ಧೈರ್ಯದಿಂದ ಪಾಲ್ಗೊಳ್ಳಿ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಹೇಳಿದರು.
ಇದನ್ನೂ ಓದಿ:ಕ್ರೀಡಾಕೂಟದಲ್ಲಿ ಎಕ್ಸಲಂಟ ವಿದ್ಯಾರ್ಥಿಗಳ ಸಾಧನೆ
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿದರು. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಗೆದ್ದು ಕೀರ್ತಿವಂತರಾಗಿ ಎಂದರು.
ಬಿಇಒ ಮೈಲೇಶ್ ಬೇವೂರು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು, ಶ್ರೀರೇಣುಕಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಇಂದುಮತಿ ತಿಪ್ಪೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಪ್ರವೀಣ ಕುಮಾರ್, ಸಮನ್ವಯ ಅಧಿಕಾರಿ ಎಂ.ಎಸ್.ಪ್ರಭಾಕರ, ಬಿಸಿಯೂಟ ಅಧಿಕಾರಿ ಎಸ್.ರಾಜಕುಮಾರ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಸೋಮಪ್ಪ, ನಿವೃತ್ತ ಶಿಕ್ಷಕ ಕೊಟ್ರಗೌಡ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವಿಚಂದ್ರ, ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣನಾಯ್ಕ, ತಾಲೂಕು ದೈಹಿಕ ಪ್ರೌ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೆಖರ, ಬಿಆರ್‌ಸಿ ಪರಮೇಶ್ವರ ಸೊಪ್ಪಿಮಠ ಇತರರಿದ್ದರು.