ಸಂವಿಧಾನ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಿ

Participate in the Constitutional Convention
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಸಂವಿಧಾನ ಸಂಕಲ್ಪ ಸಮಾವೇಶ ಪೂರ್ವಭಾವಿ ಸಭೆ ನಡೆಯಿತು. ಭರಮಣ್ಣ ತೋಳಿ, ಮಲ್ಲಿಕಾರ್ಜುನ ಬಾಟಗಿ, ಮಹಾದೇವಿ ಗೋಕಾಕ ಮತ್ತಿತರರಿದ್ದಾರೆ.
Published on

ವಿಜಯಪುರ: ದಾವಣಗೆರೆಯಲ್ಲಿ ಫೆ. 2 ರಂದು ನಡೆಯಲಿರುವ ಸಂವಿಧಾನ ಸಂಕಲ್ಪ ಸಮಾವೇಶಕ್ಕೆ ವಿಜಯಪುರ ಜಿಲ್ಲೆಯ ವಿವಿಧ ಪ್ರಗತಿಪರ ದಲಿತ ಸಂಘಟನೆಗಳು, ವಾಲ್ಮೀಕಿ ಸಂಘಟನೆಗಳು, ಅಹಿಂದ ಸಂಘಟನೆ, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲ ಶೋಷಿತ ವರ್ಗದ ಜನರು ಕಾರ್ಯಕ್ರಮಕ್ಕೆ ಭಾಗವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಭರಮಣ್ಣ ತೋಳಿ ಹೇಳಿದರು.

ದಾವಣಗೆರೆಯಲ್ಲಿ ನಡೆಯಲಿರುವ ಮಾನವ ಬಂಧುತ್ವ ವೇದಿಕೆ ದಶಮಾನೋತ್ಸವ ಸಂವಿಧಾನ ಸಂಕಲ್ಪ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಸುಮಾರು 2 ಲಕ್ಷ ಜನರು ಸೇರಲಿದ್ದು, ನಮ್ಮ ಜಿಲ್ಲೆಯಿಂದ ಕನಿಷ್ಠ 50 ಸಾವಿರ ಜನರು ಭಾಗವಹಿಸಲು ಸಲಹೆ ನೀಡಿದರು.

ಅಖಿಲ ಭಾರತೀಯ ವಾಲ್ಮೀಕಿ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ ಮಾತನಾಡಿ, ಸಂವಿಧಾನ ಸಂಕಲ್ಪ ಸಮಾವೇಶಕ್ಕೆ ಪ್ರತಿಯೊಂದು ಗ್ರಾಮದ ಎಲ್ಲ ಸಮುದಾಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಮುಖಂಡರಾದ ಮಿಲಿಂದ ಚಂಚಲಕರ, ರವಿ ಕಿತ್ತೂರ, ಶ್ರೀನಾಥ ಪೂಜಾರಿ, ತಿಪ್ಪಣ್ಣ ದೊಡಮನಿ, ಜಕ್ಕಪ್ಪ ಯಡವೆ, ಕಾಶೀನಾಥ ಕಟ್ಟಿಮನಿ, ಸೋಮನಾಥ ಕಳ್ಳಿಮನಿ, ಮಲ್ಲಪ್ಪ ಕವಲಗಿ, ಸಂಜು ಕೆಂಭಾವಿ, ಮಹಾದೇವಿ ಗೋಕಾಕ, ಆರತಿ ಶಹಾಪೂರ, ಚನ್ನು ಕಟ್ಟಿಮನಿ, ಮಾದೇವಿ ಬನಸೋಡೆ, ಲಕ್ಕಪ್ಪ ಹರಿಜನ, ಸುರೇಶ ಮಸೂತಿ, ಸಂಜುಕುಮಾರ ನಾಯ್ಕೋಡಿ, ಅನೀಲ ಹೊಸಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net