ಸೋಲು- ಗೆಲುವು ಎನ್ನದೆ ಕ್ರೀಡೆಯಲ್ಲಿ ಭಾಗವಹಿಸಿ

bly
ಸಿರಗುಪ್ಪದ ತಾಲೂಕು ಕ್ರೀಡಾಂಗಣದಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್ ಮಂಗಳವಾರ ಚಾಲನೆ ನೀಡಿದರು. ತಾಲೂಕು ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಬಿ.ರಮೇಶ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಈರಣ್ಣ, ಜಿಲ್ಲಾ ಗೌರವಾಧ್ಯಕ್ಷ ಚೆನ್ನಪ್ಪ, ಪ್ರಮುಖರಾದ ರಸೂಲ್‌ಸಾಬ್,ಬಿ.ಕಾಳಿಂಗ, ಸಿಆರ್‌ಪಿಗಳಾದ ರಾಮಚಂದ್ರ, ವಿಜಯ್‌ಕುಮಾರ, ಕೋಮಲ, ರಾಜಶೇಖರ ಇದ್ದರು.
Published on

ಸಿರಗುಪ್ಪ:ಸೋಲು- ಗೆಲುವು ಎನ್ನದೆ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್ ಹೇಳಿದರು.


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪ್ರಸಕ್ತ ಸಾಲಿನ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ
ಮಾತನಾಡಿದರು.

ಕ್ರೀಡೆಗಳ ಪಿತಾಮಹನೆಂದು ಪ್ರಖ್ಯಾತಿಯಾದ ದ್ಯಾನ್‌ಚಂದ್ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಕ್ರೀಡಾಕೂಟದ ದಿನದಂದು ಕ್ರೀಡೆಗಳನ್ನು ಆಯೋಜಿಸಿರುವುದು ಶ್ಲಾಘನೀಯ. ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಧ್ಯಾನಚಂದ್‌ರಂತೆ ಉತ್ತಮ ಸಾಧನೆಗೈದು ತಾಲೂಕಿಗೆ ಕೀರ್ತಿ ತರಬೇಕು ಎಂದರು.


ದೈಹಿಕ ಶಿಕ್ಷಕ ಮಲ್ಲಿಕಾರ್ಜುನಗೌಡ ಮಾತನಾಡಿ, ಮೂಲತಃ ಕುಸ್ತಿಪಟುವಾಗಿದ್ದ ದ್ಯಾನ್‌ಚಂದ್ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುವುದರೊಂದಿಗೆ 16ನೇ ವಯಸ್ಸಿನಲ್ಲಿ ಹಾಕಿ ತರಬೇತಿ ಪಡೆದರು. ಅವರು ಅಂತಾರಾಷ್ಟ್ರೀಯ ಮಟ್ಟದ ಹಾಕಿ ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ್ದು ಭಾರತದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.


ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕರ ಸಂಘದ ತಾಲೂಕು ಗೌರವಾಧ್ಯಕ್ಷ ಉಪೇಂದ್ರರನ್ನು ಸನ್ಮಾನಿಸಲಾಯಿತು. ತಾಲೂಕು ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಬಿ.ರಮೇಶ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಈರಣ್ಣ, ಜಿಲ್ಲಾ ಗೌರವಾಧ್ಯಕ್ಷ ಚೆನ್ನಪ್ಪ, ಸಿಆರ್‌ಪಿಗಳಾದ ರಾಮಚಂದ್ರ, ವಿಜಯ್‌ಕುಮಾರ, ಕೋಮಲ, ರಾಜಶೇಖರ, ದೈಹಿಕ ಶಿಕ್ಷಕರಾದ ಶಾರದಾ, ಮಲ್ಲಮ್ಮ ಹಾಗೂ ಕ್ರೀಡಾಪಟುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net