ಸೋಲು ಗೆಲವು ಲೆಕ್ಕಿಸದೇ ಕ್ರೀಡೆಯಲ್ಲಿ ಭಾಗವಹಿಸಿ

Untitled design (1)
ಕುಕನೂರಿನ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಆವಣರದಲ್ಲಿ ಪ್ರೌಢ ಶಾಲೆಗಳ ಪೂರ್ವ ವಲಯ ಮಟ್ಟದ ಕ್ರೀಡಾಕೂಟವನ್ನು ಎಸ್ಡಿಎಂಸಿ ಅಧ್ಯಕ್ಷ ಗವಿಸಿದ್ಧಪ್ಪ ಆರೇರ ಬುಧವಾರ ಉದ್ಘಾಟಿಸಿದರು. ಪಪಂ ಸದಸ್ಯ ಸದಸ್ಯ ಸಿದ್ದು ಉಳ್ಳಾಗಡ್ಡಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ವಿ.ಎ.ಅಂಗಡಿ, ಮುಖ್ಯ ಶಿಕ್ಷಕರಾದ ಎಸ್.ಜಿ.ಪಾಟೀಲ್, ನಿಂಗರಾಜ, ಬಸಮ್ಮ ಅರಳಲಿಮಠ ಇದ್ದರು.
Published on

ಕುಕನೂರು: ಸೋಲು ಗೆಲವು ಲೆಕ್ಕಿಸದೇ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಗವಿಸಿದ್ಧಪ್ಪ ಆರೇರ ಹೇಳಿದರು.


ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಆವಣರದಲ್ಲಿ ಪ್ರೌಢ ಶಾಲೆಗಳ ಪೂರ್ವ ವಲಯ ಮಟ್ಟದ ಕ್ರೀಡಾಕೂಟ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹ ಸದೃಢ
ಕ್ರೀಡೆಯಲ್ಲಿ ಸತತವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಉದ್ಯೋಗ ಮೀಸಲಾತಿ ಸಮಯದಲ್ಲಿ ಕ್ರೀಡಾ ಪ್ರಮಾಣ ಪತ್ರ ನೆರವಾವಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯೆ ಜತೆಗೆ ಕ್ರೀಡಾಸಕ್ತಿಯು ಮುಖ್ಯವಾಗಿದೆ ಎಂದರು.


ದೈಹಿಕ ಶಿಕ್ಷಕ ಆರ್.ಡಿ.ರಾಠೋಡ, ಶಿಕ್ಷಕರಾದ ಶರಣಪ್ಪ ಗುಡ್ಲಾನೂರ, ವಿ.ಎ.ಹಿರೇಮಠ, ಎನ್.ಟಿ.ಸಜ್ಜನ್, ದೇವೇಂದ್ರಪ್ಪ, ವಿ.ಬಿ.ಕಟ್ಟಿ, ತಾಲೂಕ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಉಮೇಶ್ ಕಂಬಳಿ, ಹನುಮಂತಪ್ಪ ನಾಮದಾರ, ಪತ್ರಕರ್ತ ರುದ್ರಪ್ಪ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net