ಕ್ರೀಡೆಯಲ್ಲಿ ಭಾಗವಹಿಸಲಿ

22NAGAR2
Published on

ನಾಗರಮುನ್ನೋಳಿ: ಮೊಬೈಲ್ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ರ‍್ಯಾಯಿ ಹೇಳಿದರು.

ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲೆಯ ಕ್ಲಸ್ಟರ್‌ಮಟ್ಟದ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಜೋತ್ಯಪ್ಪ ಖಗನ್ನವರ, ಸಿಆರ್‌ಸಿ ಚಿದಾನಂದ ಯಾದಗೂಡೆ, ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ, ಸಂಜು ಬಾನೆ, ರಾಜು ಚೌಹಾಣ, ಜಾಕೀರ ನದಾಫ್, ಸಂದೀಪ ಮೋರೆ, ವೈ.ಎಸ್.ಬುಡಗೋಳ, ಎಂ.ಕೆ.ಖೋತ, ಎಸ್.ಆರ್.ಕುದರಗಿ, ಎಸ್.ಎನ್.ಶಿರಗೂರ, ಉಮೇಶ ತೋಟದ, ಪಿ.ಎಂ.ಕಂದಾರೆ, ಶೈಲಾ ಹುದ್ದಾರ, ಎಸ್.ಎನ್.ತಳವಾರ, ಎಲ್.ವೈ.ಚೌಗಲೆ, ಡಿ.ಎಸ್.ಬಹದೂರಿ, ಸಂಗೀತಾ ಗಿರಿಮಲ್ಲನ್ನವರ, ಮಿಥುನ ಕಾಂಬಳೆ, ಎಸ್.ಎಸ್.ಕಡೆದ, ರಮೇಶ ತಳವಾರ, ಜೆ.ಎಂ.ಚೌಗಲೆ, ಯು.ಬಿ.ಹರಗಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net