ರೊಟ್ಟಿ ಬುತ್ತಿ ಮೂಲಕ ಸೇವೆಯಲ್ಲಿ ಭಾಗಿ

rbk 7-2
ರಬಕವಿ ಬ್ರಹ್ಮಾನಂದರ ಉತ್ಸವ ನಿಮಿತ್ತ ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ರೊಟ್ಟಿ ಜಾತ್ರೆಯ ಪಾದಯಾತ್ರೆಯು ಶ್ರೀಮಠಕ್ಕೆ ತೆರಳಿತು.
Published on

ರಬಕವಿ/ಬನಹಟ್ಟಿ: ಕಳೆದ 9 ದಿನಗಳಿಂದ ನಡೆಯುತ್ತಿರುವ ಬ್ರಹ್ಮಾನಂದರ ಉತ್ಸವ ಸಮಾರಂಭದಲ್ಲಿ ಸೋಮವಾರ ತಾಲೂಕಿನ ಮದನಮಟ್ಟಿ ಗ್ರಾಮದ ಮಹಿಳೆಯರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ದಾಸೋಹ ಸೇವೆಯಲ್ಲಿ ಭಾಗವಹಿಸಿದರು.

ನಗರದ ಹಳೇ ಬಸ್ ನಿಲ್ದಾಣದಿಂದ ರೊಟ್ಟಿ ಜಾತ್ರೆಯ ಪಾದಯಾತ್ರೆಯು ಶ್ರೀ ಮಠಕ್ಕೆ ತೆರಳಿತು. ಅವರನ್ನು ಸ್ವಾಗತಿಸಿ ಮಾತನಾಡಿದ ಗುರುಸಿದ್ಧೇಶ್ವರ ಶ್ರೀಗಳು, ಬ್ರಹ್ಮಾನಂದರ ಸೇವೆಗೆ ತಾಲೂಕು ಸೇರಿ ರಾಜ್ಯದ ಉದ್ದಗಲಕ್ಕೂ ಭಕ್ತರು ಆಗಮಿಸಿ ದಾಸೋಹ ಸೇವೆಯಲ್ಲಿ ಭಾಗಹಿಸುತ್ತಿದ್ದಾರೆ. ನಿತ್ಯದ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು ಶ್ರೀ ಮಠದ ದಾಸೋಹಕ್ಕೆ ಮೀಸಲಿಡುವ ಗ್ರಾಮೀಣ ಭಾಗದ ಮಹಿಳೆಯರ ಸೇವೆ ಶ್ಲಾಘನೀಯ ಎಂದರು.

ಜಿಪಂ ಮಾಜಿ ಸದಸ್ಯೆ ಸಾವಿತ್ರಿ ಬಾಬಾಗೌಡ ಪಾಟೀಲ ಮಾತಮನಾಡಿ, ಬ್ರಹ್ಮಾನಂದ ಆಶ್ರಮದಲ್ಲಿ ಗುರುಸಿದ್ಧೇಶ್ವರ ಶ್ರೀಗಳು ಪೀಠಾಧಿಪತಿಗಳಾದ ಮೇಲೆ ಅವರ ಆಧ್ಯಾತ್ಮಿಕ ಚಿಂತನೆ, ಪ್ರವಚನಕ್ಕೆ ನಾವೆಲ್ಲರೂ ಮಾರುಹೋಗಿದ್ದು, ಹಿಂದಿನ ಬ್ರಹ್ಮಾನಂದರ ಕಾಲ ಮತ್ತೆ ಮರಳಿದಂತೆ ಭಾಸವಾಗುತ್ತಿದೆ ಎಂದರು.

ಎಂ. ಡಿ. ಪಾಟೀಲ, ಶ್ರೀಶೈಲ ಅವಕ್ಕನವರ, ಲಕ್ಷ್ಮಣ ಹಣಮನ್ನವರ, ಬಸು ಮಲ್ಲನ್ನವರ, ಮಾಳು ಮಲ್ಲನ್ನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net