ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ

Participate in religious activities.
ತಿಕೋಟಾ ತಾಲೂಕಿನ ತಾಜಪೂರ(ಎಚ್​) ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಜೀಣೋರ್ದ್ಧಾರಕ್ಕೆ ಧರ್ಮಸ್ಥಳ ಟ್ರಸ್ಟ್​ನಿಂದ ಬಿಡುಗಡೆ ಮಾಡಿದ ಡಿಡಿಯನ್ನು ದೇವಸ್ಥಾನ ಸಮಿತಿಗೆ ಸತೀಶ ಹಸ್ತಾಂತರಿಸಿದರು. ಸಿದ್ದಣ್ಣ ಶೇಡಿಹಾಳ, ವೆಂಕಟೇಶ ಗಡ್ಡಿ, ಪ್ರಸಾದ ಪೂಜಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜನರನ್ನು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸುವುದರಿಂದ ಅವರಲ್ಲಿ ಸಹೋದರತ್ವ ಭಾವನೆ ಜಾಗೃತಗೊಂಡು ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಜಯಪುರ &2 ತಾಲೂಕು ಯೋಜನಾಧಿಕಾರಿ ಸತೀಶ ಹೇಳಿದರು.

ತಿಕೋಟಾ ತಾಲೂಕಿನ ತಾಜಪೂರ(ಎಚ್​) ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಜೀಣೋರ್ದ್ಧಾರಕ್ಕೆ ಧರ್ಮಸ್ಥಳದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದ 2.5 ಲ ರೂಗಳ ಡಿಡಿಯನ್ನು ಇತ್ತೀಚೆಗೆ ದೇವಸ್ಥಾನದ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳು ರಾಜ್ಯದೆಲ್ಲೆಡೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಹಾಲಿನ ಡೇರಿ ಕಟ್ಟಡ ರಚನೆಗೆ ಅನುದಾನ, ದೇವಸ್ಥಾನ ಜೀಣೋರ್ದ್ಧಾರ, ಸಮುದಾಯ ಭವನ ನಿರ್ಮಾಣ, ಶಾಲಾ ಕಟ್ಟಡ, ಾನದೀಪ ಶಿಕರ ಒದಗಣೆ, ಸುಾನನಿಧಿ ಶಿಷ್ಯವೇತನ ವಿತರಣೆ ಹಾಗೂ ಜನಮಂಗಳ ಕಾರ್ಯಕ್ರಮದಡಿ ವೈದ್ಯಕಿಯ ಸಲಕರಣೆಗಳ ವಿತರಿಸುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಎಲ್ಲರೂ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಣ್ಣ ಶೇಡಿಹಾಳ ಮಾತನಾಡಿ, ಧರ್ಮಸ್ಥಳ ಟ್ರಸ್ಟ್​ ಯೋಜನೆ ಮೂಲಕ ರಾಜ್ಯದ ಗ್ರಾಮ ಗ್ರಾಮಗಳಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಅನುದಾನ ಒದಗಿಸುವ ಜತೆಗೆ ಗ್ರಾಮಗಳ ಕಲ್ಯಾಣಕ್ಕಾಗಿ ಧರ್ಮಸ್ಥಳದ ಪೂಜ್ಯರು ಮಾಡುತ್ತಿರುವ ಕಾರ್ಯ ಶ್ಲಾನೀಯ ಎಂದರು.

ಯೋಜನೆಯ ಕೃಷಿ ಅಧಿಕಾರಿ ವೆಂಕಟೇಶ ಗಡ್ಡಿ, ವಲಯದ ಮೇಲ್ವಿಚಾರಕ ಪ್ರಸಾದ ಪೂಜಾರಿ, ಕಾರ್ಯದರ್ಶಿ ಪರಮೇಶ್ವರ ಕಲಬೀಳಗಿ, ಗ್ರಾ.ಪಂ. ಅಧ್ಯ ರವಿಕುಮಾರ ಬಿದರಿ, ಶಿಕ ಎಸ್​.ಡಿ. ಕುಮಟಗಿ, ಮಲ್ಲು ಕುಮಟಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net