

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹುರಕಡ್ಲಿ ಅಜ್ಜ ಕಾನೂನು ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಎಸ್ ಘಟಕದ ಸಮಾರೋಪ ಸಮಾರಂಭ ನೆರವೇರಿತು.
ಗದಗ ಆರ್ಡಿಪಿಆರ್ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ನಾಡಗೌಡರ ಮಾತನಾಡಿ, ಕಾನೂನು ಪದವೀಧರರಿಗೆ ಲಭ್ಯವಿರುವ ಮಾರ್ಗಗಳನ್ನು ತಿಳಿಸಿದ ಅವರು, ಕಾನೂನು ರಚನೆಯಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ಎಂ. ವಿಶ್ವನಾಥ ಮಾತನಾಡಿ, ಕಾನೂನು ಪದವಿಧರರ ಬಾಧ್ಯತೆ, ಕೋರ್ಸಿನೊಂದಿಗೆ ಹಾಗೂ ಕಕ್ಷಿದಾರರೊಂದಿಗೆ ತಮ್ಮ ಬಾಂಧವ್ಯದ ಕುರಿತು ಮಾಹಿತಿ ನೀಡಿದರು.
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಉಪಾಧ್ಯಕ್ಷ ವಿ.ಬಿ. ಯಳಲ್ಲಿ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಇಂಡಿ, ಎಸ್.ಸಿ.ನೀಲಗುಂದ, ಆರ್.ಕೆ.ನಾವಲಗಿಮಠ, ಡಾ.ಎಸ್.ಎಸ್. ಗಾಳಿಮಠ, ಡಾ. ಸವಿತಾ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.