ಓದಿನೊಂದಿಗೆ ಪಠ್ಯೇತರ ಚಟವಟಿಕೆಯಲ್ಲೂ ಭಾಗವಹಿಸಿ

Inauguration of sports and cultural activities program
ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಪ್ರಭಾರ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ ಉದ್ಘಾಟಿಸಿದರು. ಬಸವರಾಜ ಸಿಂದಗಿಮಠ, ಆರ್.ಜಿ. ಪಾಟೀಲ, ಆರ್.ಎಸ್. ದೇಸಾಯಿ, ಅರ್ಜುನ ಗುಳೇದಗುಡ್ಡ ಇತರರಿದ್ದರು.
Published on

ಬಾದಾಮಿ: ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಓದಿನ ಜೊತೆಗೆ ಸಂಗೀತ, ಚಿತ್ರಕಲೆ, ಆಟಪಾಠಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾತ್ರ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ ಹೇಳಿದರು.

ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಾಗೂ ಶಾಲಾ ಸಂಸತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕು ಎಂದರು.

ಪ್ರಾಚಾರ್ಯ ಎಲ್.ಎ. ಬಿರಾದಾರ ಮಾತನಾಡಿ, ವಿನಯ, ಶ್ರದ್ಧೆ, ಭಕ್ತಿ, ಸತತ ಪ್ರಯತ್ನದಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಹಾಗೂ ಕೀರ್ತಿ ಪಡೆಯುಬಹುದು ಎಂದರು.

ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬಾಡ್ಜ್ ನೀಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಬಸವರಾಜ ಸಿಂದಗಿಮಠ, ಆರ್.ಜಿ. ಪಾಟೀಲ, ಆರ್.ಎಸ್. ದೇಸಾಯಿ, ಅರ್ಜುನ ಗುಳೇದಗುಡ್ಡ, ರೂಪಾ ಹೊಟಗಿ, ಎಮ್.ಎಚ್. ಬಾಗವಾನ, ವಿ.ಎಚ್. ಚಿಕ್ಕಮಠ, ಎಸ್.ಪಿ. ಗದಗಿನ, ಕಲ್ಪನಾ ಡಾಣಕಶಿರೂರ, ಶ್ರೀದೇವಿ ಬಗಲಿ, ರಿಜ್ವಾನ್ ಮುಲ್ಲಾ, ಎಮ್.ವಿ. ಮಾದನ್ನವರ, ಎಸ್.ಎಂ. ಹಡಪದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net