

ಬೆಳಗಾವಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಬೇಕು ಎಂದು ಕೆಎಲ್‌ಎಸ್ ಗೋಗಟೆ ವಾಣಿಜ್ಯ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ವೇಣುಗೋಪಾಲ ಜಾಲಿಹಾಳ ಹೇಳಿದರು.
ಮಹಾವಿದ್ಯಾಲಯದ ಬಿಸಿಎ ವಿಭಾಗವು ಚತುಷ್ಪಥದಲ್ಲಿ ಗುರುವಾರ ಆಯೋಜಿಸಿದ್ದ ಇನ್‌ಹೌಸ್‌ಗೆ ಐ.ಟಿ. ಫೆಸ್ಟ್ ಮ್ಯಾಗ್ನಮ್-2024 ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ಪರ್ಧೆಯ ಪ್ರತಿಯೊಂದು ಅಂಶಗಳನ್ನು ತಿಳಿದುಕೊಳ್ಳಬೇಕು. ಇದರಿಂದ ಸೃಜನಶೀಲತೆ ಮತ್ತು ಕೌಶಲಗಳು ವೃದ್ಧಿಯಾಗುತ್ತವೆ ಎಂದರು. ಬಿಸಿಎ ವಿಭಾಗದ ಸಂಯೋಜಕಿ ಡಾ. ಅಸ್ಮಿತಾ ದೇಶಪಾಂಡೆ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಇವೆಂಟ್‌ನಲ್ಲಿ ಕೋಡಿಂಗ್, ಡಿಸೈನಿಂಗ್ ಸ್ಪರ್ಧೆಗಳು ನಡೆದವು. ಮಾರ್ಕೆಟಿಂಗ್, ಡೇಟಾ ಅನಾಲಿಟಿಕ್, ಕಮ್ಯುನಿಕೇಶನ್, ಗೇಮಿಂಗ್, ಕಂಟೆಂಟ್ ಕ್ರಿಯೇಶನ್, ಸೈಬರ್ ಸೆಕ್ಯೂರಿಟಿ ಇನ್ನೂ ಅನೇಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಪ್ರತಿಭೆ ಮತ್ತು ಕೌಶಲಗಳನ್ನು ಪ್ರದರ್ಶಿಸಿದರು.