ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ

1
ಯಕ್ಸಂಬಾದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ ಜರುಗಿತು. ಮಲ್ಲಿಕಾರ್ಜುನ ಕರಾಳೆ, ಬಸವರಾಜ ಅಮ್ಮಿನಬಾವಿ, ಭರತ ನಾಗನೂರೆ ಇತರರು ಇದ್ದರು.
Published on

ಚಿಕ್ಕೋಡಿ ಗ್ರಾಮೀಣ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜನತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಕರಾಳೆ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕರಾಟೆ, ಜುಡೋ ಮತ್ತು ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಅಮ್ಮಿನಬಾವಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದರು.

ಭರತ ನಾಗನೂರೆ, ಡಿ.ಎಸ್.ಪಾಟೀಲ, ಸುರೇಶ ಶಾಂಡಗೆ, ಎಸ್.ಎಸ್.ದೇಶಪಾಂಡೆ, ಮುಂಜನಾಥ ಭುವಿ, ಬಿ.ಎಂ.ಪಾಟೀಲ, ಜೆ.ಡಿ.ಪಾಟೀಲ, ಮಹೇಶ ಕಟ್ಟಿಮಣಿ, ಎನ್.ಜಿ.ಪಾಟೀಲ, ಎಸ್.ಎಸ್.ಚಲವಾದಿ, ಎಸ್.ಡಿ.ಖೊತ, ಶಿಕ್ಷಕರಾದ ಬಿ.ಎ.ಮುತ್ನಾಳೆ, ಎಸ್.ಎಂ.ಮಿರ್ಜೆ, ಎಸ್.ಎಸ್.ಪಟವರ್ಧನ, ಎನ್.ಬಿ.ಚಿತಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net