ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಲಿ

29CKD4
ಚಿಕ್ಕೋಡಿ ಜಿಎಸ್‌ಇಎಸ್ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣ-ರಾಧೆ ವೇಷ ಧರಿಸಿ ಸಂಭ್ರಮಿಸಿದರು. ಎಸ್. ಬಿ.ಮಗದುಮ್ಮ, ಸೀಮಾ ಹುಕ್ಕೇರಿ, ಭಾಗ್ಯಶ್ರೀ ಪಾಟೀಲ ಇತರರಿದ್ದರು.
Published on

ಚಿಕ್ಕೋಡಿ: ಮಕ್ಕಳು ಪಠ್ಯೇತರ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಜಿಎಸ್‌ಇಎಸ್ ಸಂಸ್ಥೆಯ ಚೇರ್ಮನ್ ಎಸ್.ಬಿ.ಮಗದುಮ್ಮ ಹೇಳಿದರು. ಇಲ್ಲಿನ ಜಿಎಸ್‌ಇಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್.ಬಿ.ಮಗದುಮ್ಮ ಪಿಯು ಕಾಲೇಜು ಉಪನ್ಯಾಸಕಿ ಸೀಮಾ ಹುಕ್ಕೇರಿ ಮಾತನಾಡಿ, ಟಿವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳು ದೂರ ಉಳಿಯಬೇಕು ಎಂದರು. ಮುಖ್ಯ ಶಿಕ್ಷಕಿ ಭಾಗ್ಯಶ್ರೀ ಪಾಟೀಲ, ಲಲಿತಾ ಹಿರೇಮಠ, ಸ್ವಾತಿ ಮಂಗಸೂಳಿ, ಸಂತೋಷ ಖಟಾವಕರ, ಅಶ್ವಿನಿ ಪರೀಟ ಇತರರಿದ್ದರು. ನಿರ್ಮಲ ಕದ್ರಾಪುರ ಸ್ವಾಗತಿಸಿದರು. ಅರ್ಚನಾ ಪಾಟೀಲ ನಿರೂಪಿಸಿದರು. ಅನುರಾಧಾ ಉಪಾಧ್ಯಾಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net