ಪಾರ್ಟ ಟೈಮ್ ಜಾಬ್ ಹೆಸರಿನಲ್ಲಿ 4.74 ಲಕ್ಷ ರೂ. ವಂಚನೆ

Cibra
Published on

ಹಾವೇರಿ: ಪಾರ್ಟ್ ಟೈಮ್ ಜಾಬ್ ಮೂಲಕ ಟಾಸ್ಕ್ ಕಂಪ್ಲೇಟ್ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ 4.74 ಲಕ್ಷ ರೂ. ಮೋಸ ಮಾಡಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಏಲಕ್ಕಿ ಓಣಿಯ ಗಣೇಶ ಮೃತ್ಯುಂಜಯ ನೆಲವಿಗಿ (26) ಮೋಸ ಹೋದವರು.
ಇವರಿಗೆ ವಿಕ್ರಮ ಎಂಬುವರು ಫೋನ್ ಮಾಡಿ ಪಾರ್ಟ ಟೈಮ್ ಜಾಬ್ ಮೂಲಕ ಟಾಸ್ಕ ಕಂಪ್ಲೇಟ್ ಮಾಡಲು ವಾಟ್ಸ್‌ಅಪ್ ಮೂಲಕ ಲಿಂಕ್ ಕಲುಹಿಸಿ ತನ್ನ ಖಾತೆಯಿಂದ 4.74 ಲಕ್ಷ ರೂ. ಅನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net