

ಶಿವಮೊಗ್ಗ: ಮನೆಯಲ್ಲೇ ಕುಳಿತು ಪಾರ್ಟ್ ಟೈಮ್ ವರ್ಕ್ ಮಾಡಿ ಸಾವಿರಾರು ರೂ. ದುಡಿಯುವ ಕನಸು ಕಂಡ ಮಹಿಳೆಯೊಬ್ಬರು ಬರೋಬ್ಬರಿ 4.03 ಲಕ್ಷ ರೂ. ಕಳೆದುಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಹಳ್ಳಿಯೊಂದರ 39 ವರ್ಷದ ಮಹಿಳೆಗೆ ವಂಚನೆಗೆ ಒಳಗಾಗಿದ್ದಾರೆ. ಫೇಸ್‌ಬುಕ್ ಪೇಜ್ ವೀಕ್ಷಿಸುವಾಗ ಪಾರ್ಟ್ ಟೈಮ್ ಜಾಬ್ ಬಗ್ಗೆ ಲಿಂಕ್‌ನ್ನು ಮಹಿಳೆ ಒತ್ತಿದಾಗ ಫ್ಲಾಟ್‌ಫಾರಂ ತೆರೆದುಕೊಂಡಿತ್ತು. ಮೊಬೈಲ್ ನಂಬರ್, ಹೆಸರು ಮತ್ತು ವಿಳಾಸ ಭರ್ತಿ ಮಾಡಿದ ಮಹಿಳೆ ವಿವಿಧ ಟಾಸ್ಕ್‌ಗಳನ್ನು ಮುಗಿಸಿದ್ದರು.
ಈ ವೇಳೆ ಮಹಿಳೆಯ ಫ್ಲಾಟ್‌ಫಾರಂ ಖಾತೆಯಲ್ಲಿ 350 ರೂ. ಜಮೆ ಆಗಿರುವುದಾಗಿ ತೋರಿಸಿತ್ತು. ಮಹಿಳೆ ಆ ಹಣ ಬಿಡಿಸಿಕೊಳ್ಳಲು ಮುಂದಾದಾಗ 400 ರೂ. ಪಾವತಿಸುವಂತೆ ಸಂದೇಶ ಬಂದಿತ್ತು. ಪಾರ್ಟ್ ಟೈಮ್ ಜಾಬ್‌ನ ವಿವಿಧ ಟಾಸ್ಕ್‌ಗಳ ಮೂಲಕ ಅಧಿಕ ಲಾಭಾಂಶ ಬರುತ್ತದೆಂದು ನಂಬಿಸಿ ಆ.8ರಿಂದ 18ರ ಅವಧಿಯಲ್ಲಿ ಹಂತ ಹಂತವಾಗಿ 4,03 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದು ಇದೀಗ ಮಹಿಳೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.