

ಉಡುಪಿ: ಉದ್ಯೋಗನ್ವೆಷಣೆಯಲ್ಲಿದ್ದ ಮಹಿಳೆಯೊಬ್ಬರಿಗೆ ವಾಟ್ಸ್ ಅಪ್ ಕಾಲ್ ಮಾಡಿದ ಅಪರಿಚಿತ ವ್ಯಕ್ತಿ ಆನ್‌ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ, 2.52 ಲಕ್ಷ ರೂ. ವಂಚಿಸಿದ್ದಾನೆ.
ಈ ಬಗ್ಗೆ ಮಾಧವಿ ಎಂಬುವವರು ಸೆನ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದು, ಮಾ.15ರಂದು +265881731097 ಸಂಕ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ ಆನ್‌ಲೈನ್ ಟಾಸ್ಕ್ ನೀಡಿ, ಹಣ ಪಾವತಿಸುವಂತೆ ತಿಳಿಸಿದ್ದಾನೆ. ಹೀಗಾಗಿ ಮಾ.15 ರಿಂದ 20ರ ವರೆಗೆ ಒಟ್ಟು ರೂ. 2,52,600 ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಉದ್ಯೋಗ ನೀಡದೆ ಮೋಸ ಮಾಡಿರುವುದಾಗಿ ತಿಳಿಸಿದ್ದಾರೆ.