

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮನೆಯಲ್ಲಿಯೇ ಕುಳಿತುಕೊಂಡು ಪಾರ್ಟ್ ಟೈಮ್ ಆಗಿ ಕೆಲಸ ಮಾಡುವ ಮೂಲಕ ತಿಂಗಳಿಗೆ ೪೫ರಿಂದ ೭೦ ಸಾ.ರೂ.ಗಳಿಸಬಹುದು ಎಂಬ ಆಮಿಷೆಯೊಡ್ಡಿ ಮಹಿಳೆಯೊಬ್ಬರಿಗೆ ೭.೧೫ ಲಕ್ಷ ರೂ. ಆನ್‌ಲೈನ್ ಮೂಲಕ ಪಡೆದುಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ವಿರೇಂದ್ರ ಪಾಟೀಲ್ ಬಡಾವಣೆಯ ಪ್ರಿಯಾಂಕಾ ಚಿಕ್ಕಣ್ಣ ಸ್ವಾ ಮಿ ಎಂಬುವರೇ ಮೋಸ ಹೋಗಿ ಹಣ ಕಳೆದುಕೊಂಡವರು.
ಪ್ರಿಯಾAಕಾ ಅವರ ಮೊಬೈಲ್‌ಗೆ ಡಿವಿಯಾನ್ ಮತ್ತು ಮಾಹಿಸಿಂಗ್ ಎಂಬುವರು ಮೆಸೆಜ್ ಕಳುಹಿಸಿ, ಹಣ ಗಳಿಸುವ ಆಸೆ ತೋರಿಸಿದರು. ಅವರು ಕೇಳಿದಂತೆ ಮಾಡಿದಾಗ ಮರಳಿ ಪೋನ್ ಫೇ ಮೂಲಕ ಹಣ ಅವರ ಖಾತೆಗೆ ಜಮಾ ಮಾಡುವ ಮೂಲಕ ವಿಶ್ವಾಸ ಗಳಿಸಿಕೊಂಡಿದ್ದಾರೆ. ಬಳಿಕ ಕೆಲ ಟಾಸ್ಕ್ ನೀಡಿ, ಆ ಗುರಿ ತಲುಪಿದರೆ ಹೆಚ್ಚು ಹಣ ಸಿಗಲಿದೆ ಎಂದು ನಂಬಿಸಿದ್ದಾರೆ.
ಟಾಸ್ಕ್ ತಲುಪುವಂತೆ ಮಾಡಲು ಒಂದಿಷ್ಟು ಹಣ ಹಾಕುವಂತೆ ಸಂದೇಶ ಹಾಕಿದ್ದಾರೆ. ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಸಂದೇಶ ಹಾಕಿ ಕ್ರಮೇಣವಾಗಿ ೭.೧೫ ಲಕ್ಷ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಸೆನ್ ಠಾಣೆಗೆ ದೂರು ನೀಡಿದ್ದಾರೆ.