ಅರೆಕಾಲಿಕ ಉದ್ಯೋಗ ಆಮಿಷ 3.51 ಲಕ್ಷ ರೂ. ವಂಚನೆ

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ, ಕೆಲಸ ನೀಡದೆ 3.51 ಲಕ್ಷ ರೂ. ಖಾತೆಗೆ ಹಾಕಿಸಿಕೊಂಡು ವಂಚಿಸಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
44 ವರ್ಷ ದೂರುದಾರರು 2025ರ ಆ.24ರಂದು ಮನೆಯಲ್ಲಿರುವಾಗ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ, ತಾನು ಕ್ವಿಕ್ ಎಂಟರ್ ಪ್ರೈಸಸ್ ಸಂಸ್ಥೆಯ ಮೂಲಕ ಕರೆ ಮಾಡುತ್ತಿರುವುದಾಗಿ ತಿಳಿಸಿ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ತಿಳಿಸಿದ್ದಾನೆ.
ಅದರಂತೆ 25ರಂದು ವಾಟ್ಸ್ ಆ್ಯಪ್ ನಲ್ಲಿ ಕಳುಹಿಸಿದ್ದ ಕ್ಯೂಆರ್ ಕೋಡ್ ಗೆ ನೋಂದಣಿ ಶುಲ್ಕ ಎಂದು 1,000 ರೂ. ಪಾವತಿ ಮಾಡಿದ್ದಾರೆ.
ಆ ಬಳಿಕ ಕೆಲವರು ಮ್ಯಾನೇಜರ್, ಅಕೌಂಟೆಂಟ್ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾರೆ. ತಾವು ಕ್ವಿಕ್ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದು, ಈ ಸಂಸ್ಥೆಯು ನೈಜ್ಯವಾಗಿದ್ದು. ನೀವು ಹಣವನ್ನು ಹಾಕಿದರೆ ಅದಕ್ಕೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಹಣವನ್ನು ಕೊಡುವುದಾಗಿ ನಂಬಿಸಿದ್ದಾರೆ.
ಕೊಟ್ಟ ಹಣಕ್ಕೆ ಯಾವುದೇ ಕೆಲಸವನ್ನು ಕೊಡದೆ, ಹಣವನ್ನು ವಾಪಸ್ ನೀಡದೆ, ಹಣವನ್ನು ವಾಪಸ್ ಕೇಳಿದಾಗ ಹಣ ಬೇಕಾದರೆ, ಪುನಃ ರಿಫಂಡ್ ಹಣವನ್ನು ಪಾವತಿ ಮಾಡಬೇಕೆಂದು ತಿಳಿಸಿದ್ದಾರೆ. ಹಂತ ಹಂತವಾಗಿ ಒಟ್ಟು 3,51,003 ರೂ. ಹಣವನ್ನು ವಿವಿಧ ಖಾತೆಗಳಿಗೆ ಪಾವತಿಸಿಕೊಂಡು ಯಾವುದೇ ಮೊತ್ತವನ್ನು ವಾಪಾಸು ನೀಡದೆ ವಂಚಿಸಿದ್ದಾರೆ.
ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net