ಪಾರ್ಟ್‌ಟೈಮ್ ಜಾಬ್ 1.75 ಲಕ್ಷ ರೂ. ವಂಚನೆ

Fruad - Copy
Published on

ಮಂಗಳೂರು: ದೂರುದಾರರ ವಾಟ್ಸಾೃಪ್‌ಗೆ ಇ ಕೆರಿಯರ್ ಬಿಲ್ಡರ್ ಎಂಬ ಟೆಲಿಗ್ರಾಮ್ ಚಾನಲ್‌ಗೆ ಸೇರುವಂತೆ ಸಂದೇಶ ಬಂದಿದ್ದು, ಗ್ರೂಪ್‌ಗೆ ಸೇರಿದ ಅವರು ಅಂತಿಮವಾಗಿ 1.75 ಲಕ್ಷ ರೂ. ವಂಚನೆಗೊಳಗಾಗಿದ್ದು, ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಪಾರ್ಟ್‌ಟೈಮ್ ಉದ್ಯೋಗದ ಬಗ್ಗೆ ವಿವರಗಳನ್ನು ತಿಳಿಸಿ, ಗ್ರೂಪ್‌ನಲ್ಲಿ ಅವರು ಕಳುಹಿಸುವ ಯೂಟ್ಯೂಬ್ ಚಾನೆಲ್ ಲಿಂಕ್‌ಗಳನ್ನು ಲೈಕ್ ಮತ್ತು ಸಬ್‌ಸ್ಕ್ರೈಬ್ ಮಾಡಲು ತಿಳಿಸಿದ್ದು, ಅದರಂತೆ ದೂರುದಾರರು ಲೈಕ್ ಮತ್ತು ಸಬ್‌ಸ್ಕ್ರೈಬ್ ಮಾಡಿದ್ದಾರೆ. ಮೊದಲ ಹಂತದಲ್ಲಿ 7900 ರೂ. ಇವರಿಗೆ ಜಮೆಯಾಗಿದೆ. ನಂತರ ಆರೋಪಿಗಳು ಯೂ ಟ್ಯೂಬ್ ಚಾನೆಲ್‌ಗಳನ್ನು ಹೊರತಾಗಿ ಪ್ರೀಪೇಯ್ಡ ಟಾಸ್ಕ್‌ಗಳನ್ನು ಪರಿಚಯಿಸಿ ಹಣ ಹಾಕುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ಮಾ.22ರಂದು ಟೆಲಿಗ್ರಾಮ್ ಚಾನಲ್ ಮೂಲಕ ಸ್ವೀಕೃತವಾದ ಖಾತೆ ಸಂಖ್ಯೆಗೆ ತನ್ನ ಪತ್ನಿಯ ಖಾತೆಯಿಂದ 1.50 ಲಕ್ಷ ರೂ. ಹಾಗೂ ತನ್ನ ಬ್ಯಾಂಕ್ ಖಾತೆಯಿಂದ 25 ಸಾವಿರ ರೂ. ಕಳುಹಿಸಿದ್ದಾರೆ. ನಂತರ ದೂರುದಾರರು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಪಾರ್ಟ್‌ಟೈಮ್ ಜಾಬ್ ಬಗ್ಗೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಟೆಲಿಗ್ರಾಮ್ ಚಾನೆಲ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಬಗ್ಗೆ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net