ದಲಿತರಿಗೆ ಆಶ್ರಯ ನಿವೇಶನ ವಿಂಗಡಿಸಿ ;ತಹಸೀಲ್ದಾರ್‌ಗೆ ಶಾಸಕ ಡಾ. ಜಿ. ಪರಮೇಶ್ವರ್ ಸೂಚನೆ

22 MADGUGIRI 4
Published on

ಮಧುಗಿರಿ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪುರವರ ಹೋಬಳಿ ಮತ್ತು ಕೊಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 2.55 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಡಾ. ಜಿ. ಪರಮೇಶ್ವರ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ಗಂಕಾರನಹಳ್ಳಿ ಗೇಟ್ ಬಳಿ 70 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಭೂವಿ ಪೂಜೆ ನೆರವೇರಿಸಿದ ನಂತರ ಕೋಡ್ಲಾಪುರದಲ್ಲಿ ಐಡಿ ಹಳ್ಳಿ ಪುರವರ ರಸ್ತೆಯ ಕೋಡ್ಲಾಪುರ ಇಮ್ಮಡಗೊಂಡನಹಳ್ಳಿ ಮಾರ್ಗವಾಗಿ ಹಿಂದೂಪುರ ರಸ್ತೆ ಸೇರುವ 1. 7 ಕೋಟಿ ರೂ ವೆಚ್ಚದ ರಸ್ತೆ, ತಾಳೆಕೆರೆ ಗ್ರಾಮದಲ್ಲಿ ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ 15 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಲಾಯಿತು.

ನೂರು ಮನೆಗಳನ್ನು ನೀಡಿದ್ದೇನೆ: 26ಎಕರೆ ಪ್ರದೇಶದಲ್ಲಿ ಆಶ್ರಯ ನಿವೇಶನಗಳನ್ನು ವಿಂಗಡಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದು, ಈ ಭಾಗದಲ್ಲಿ ಬಹುತೇಕ ವಾಸವಿರುವ ದಲಿತರಿಗೆ ಸರ್ಕಾರದಿಂದ ಸ್ಲಬೇಕಾದ ಎಲ್ಲ ಅನುದಾನ ಕೊಡಿಸುವ ಪ್ರಯತ್ನ ಮಾಡಿರುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕೋಡ್ಲಾಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರವನ್ನು ಮರೆಯುವುದ್ಲಿ, ಋಣ ತೀರಿಸುವೆ. ಕಳೆದ ಮೂವತ್ತು ವರ್ಷಗಳಿಂದ ಪುರವರ ಹೋಬಳಿ ನನಗೆ ರಾಜಕೀಯವಾಗಿ ಬೆಳೆಸಿ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದವರೆಗೂ ಕೊಂಡೊಯ್ದಿದೆ. ನಿಮ್ಮೊಡನೆ ಅಣ್ಣ, ತಮ್ಮನಂತೆ ನಿಮ್ಮ ಜತೆಗೆ ಇರುತ್ತೆನೆ ಎಂದು ಪರಮೇಶ್ವರ್ ಭಾವುಕರಾದರು.

ಕೋಡ್ಲಾಪುರ ಗ್ರಾಪಂ ಅಧ್ಯಕ್ಷೆ ಸವಿತಾ ನರಸಿಂಹಮೂರ್ತಿ, ಉಪಾಧ್ಯಕ್ಷೆ ಮಂಜುಳಾ ಕೃಷ್ಣಮೂರ್ತಿ, ಸದಸ್ಯರಾದ ಪುಟ್ಟಹನುಮಂತಯ್ಯ, ವೆಂಕಟೇಶಪ್ಪ, ವಿಜಯಕುಮಾರ್, ಲಲಿತಮ್ಮ, ಭಾಗ್ಯಮ್ಮ , ತಿಮ್ಮಾಜಮ್ಮ, ಶಿಲ್ಪಾ ವಿಜಯಕುಮಾರ್, ಪುರವರ ಗ್ರಾಪಂ ಅಧ್ಯಕ್ಷೆ ಅಂಬಿಕಾ ರಾಮಾಂಜಿನಪ್ಪ , ಉಪಾಧ್ಯಕ್ಷೆ ರಾಧಿಕಾ ನರಸಿಂಹಮೂರ್ತಿ, ಮುಖಂಡರಾದ ಸಂಕಾಪುರ ಜಯರಾಮ್, ಪಿಡಿಒ ಶಿವಾನಂದ ಆರಾಧ್ಯ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ, ಕೆಪಿಸಿಸಿ ಸದಸ್ಯ ಮಹಮ್ಮದ್ ಫಾಜೀಲ್, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬ್ಯೆರಪ್ಪ, ಕುಪೇಂದ್ರಪ್ಪ, ತಹಸೀಲ್ದಾರ್ ವ್ಯೆ.ರವಿ, ಕೆಆರ್ ಐಡಿಎಲ್ ಎಇಇ ನಾಗಯ್ಯ, ಪಿಡಬ್ಲ್ಯುಡಿ ಎಇಇ ಹೊನ್ನೇಶಪ್ಪ , ಜಿಪಂ ಎಇಇ ಸುರೇಶ್ ರೆಡ್ಡಿ ಅರ್.ಐ.ಜಯರಾಮಯ್ಯ ಇದ್ದರು.

ಅಯ್ಯೋ ಸಿಎಂ ಎಂದು ಕೂಗಬೇಡಪ್ಪ : ಸಮಾರಂಭದಲ್ಲಿ ಮುಂದಿನ ಸಿಎಂ ಪರಮೇಶ್ವರ್ ಎಂದು ಅಭಿಮಾನಿಯೊಬ್ಬನ ೋಷಣೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅಯ್ಯೋ ಈಗಲೇ ಸಿಎಂ ಎಂದು ಕೂಗಬೇಡಪ್ಪ, ಅದೇ ನನಗೆ ಮುಳುವಾಗಿದ್ದ ಉದಾಹರಣೆಯಿದೆ ಎಂದು ನಗುತ್ತಲೇ ಹೇಳಿದರು. 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಕೊರಟಗೆರೆಯಲ್ಲಿ ಸೋಲು ಕಂಡಿದ್ದರು.

ಕಾಂಗ್ರೆಸ್ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರಾದವರೇ ಸಿಎಂ ಆದ ಉದಾಹರಣೆ ಹೆಚ್ಚಿದ್ದರೂ ಪರಮೇಶ್ವರ್ ಕ್ಷೇತ್ರದಲ್ಲಿ ಸೋಲು ಕಂಡು ಸಿಎಂ ಸ್ಥಾನದಿಂದ ವಂಚಿತರಾಗಿದ್ದರು. ಸಿಎಂ ಸ್ಥಾನ ತಪ್ಪಿಸುವ ಸಲುವಾಗಿಯೇ ಅವರನ್ನು ಸ್ವಪಕ್ಷೀಯರೇ ಸೋಲಿಸಿದರು ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅಭಿಮಾನಿಯ ಅಭಿಮಾನಕ್ಕೆ ಪ್ರತಿಕ್ರಿಯಿಸಿದರು.

ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ ಕೊಡ್ಲಾಪುರದ ಜನತೆ ಲಸಿಕೆ ಹಾಕಿಸಿ ಕೊಳ್ಳುತ್ತ್ಲಿ ಎಂದು ತಹಸೀಲ್ದಾರ್ ದೂರುತ್ತಿದ್ದಾರೆ. ಉದಾಸೀನ ಮಾಡಿದರೆ ನಿಮ್ಮ ಪ್ರಾಣದ ಜತೆಗೆ ಮತ್ತೊಬ್ಬರ ಪ್ರಾಣ ತೆಗೆಯುತ್ತಿರಾ! ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕರೊನಾ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net