

ನೊಣವಿನಕೆರೆ: ಸಂಸ್ಕಾರ, ಸಂಸತಿ ಹಾಗೂ ಆಚರಣೆಗಳನ್ನು ಉಳಿಸುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಿಪಟೂರು ತಾಲೂಕು ಗಂಗನಘಟ್ಟ ಗ್ರಾಮದ ಶ್ರೀ ಲಕ್ಷಿ$್ಮ ರಂಗನಾಥಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಿಪಟೂರು ಗ್ರಾಮಾಂತರ ಯೋಜನಾ ಕಚೇರಿ, ಬಜಗೂರು ವಲಯದ ಹಾಗೂ ಒಕ್ಕೂಟಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷಿ$್ಮ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರ್ಮಿಕ ಆಚರಣೆಗಳಿಗೆ ಅದ್ಯತೆ ನೀಡಿ, ಸಂಸ್ಕಾರ, ಸಂಸತಿ ಜತೆಗೆ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ, ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ವರ್ಗದ ಜನರ ಸಮ್ಮುಖದಲ್ಲಿ ಸಾಮೂಹಿಕ ವರಮಹಾಲಕ್ಷಿ$್ಮ ಪೂಜೆ ಆಯೋಜನೆ ಮಾಡಿರುವುದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮವಾಗಿದೆ ಎಂದರು.
ಯೋಜನೆ ಸಮಾಜದ ಎಲ್ಲವರ್ಗದ ಜನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶೇ.14.5 ಅತಿ ಕಡಿಮೆ ಬಡ್ಡಿದರದಲ್ಲಿ ತಮ್ಮ ಯೋಜನೆಯ ಸಹಯೋಗದ ಬ್ಯಾಂಕ್ಗಳಲ್ಲಿ ಪ್ರಗತಿ ನಿಧಿ ಹೆಸರಿನಲ್ಲಿ ಸಾಲ ಸೌಲಭ್ಯ ನೀಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಸುಜ್ಞಾನ ಶಿಷ್ಯವೇತನ, ವಯಸ್ಸಾದವರಿಗೆ ಮಾಸಾಶನ, ವಸತಿ ಇಲ್ಲದ ಬಡ ಕುಟುಂಬಗಳಿಗೆ ವಾತ್ಸಲ್ಯ ಮನೆ ನಿಮಾರ್ಣ, ಕೆರೆ ಕಟ್ಟೆ ಅಭಿವೃದ್ಧಿ ಸೇರಿದಂತೆ ಜನಪರ ಅಭಿವೃದ್ಧಿ ಕೆಲಸಗಳನ್ನು ಯೋಜನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲಿ ಎಂದು ಆಶೀಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ದಸರೀಘಟ್ಟ ಕ್ಷೇತ್ರದ ಶ್ರೀಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಿ, ವರಮಹಾಲಕ್ಷಿ$್ಮ ಪೂಜೆ ಧಾರ್ಮಿಕ ಆಚರಣೆಯ ಅಂಗವಾಗಿದ್ದು, ಸಾಮಾಜಿಕ ಬದುಕಿನಲ್ಲಿ ಮನುಷ್ಯನಿಗೆ ವರಮಹಾಕ್ಷಿ$್ಮ ಅವಶ್ಯಕತೆ ಇದ್ದು, ನಿಷ್ಠೆಯಿಂದ ಪೂಜೆಸಿದರೆ ವರನೀಡುವ ನಂಬಿಕೆಯಿಂದ ಆಚರಿಸುತ್ತಿದ್ದು, ಗ್ರಾಮದ ಶ್ರೇಯಸ್ಸಿಗೆ ಹಾಗೂ ಸಾರ್ವಜನಿಕರ ಅಗತ್ಯತೆಗೆ ಪೂರಕವಾಗಿರಲಿ ಎಂದು ಹಾರೈಸಿದರು.
ಯೋಜನೆಯ ನೇತ್ರಾವತಿ ಸಂಘದ ಸದಸ್ಯ ಲೋಕೇಶ್ಗೆ 25,000 ಸಾವಿರ ಮಂಜೂರಾತಿ ಪತ್ರ ಹಾಗೂ ಯೋಜನೆಯ ಎಲ್ಲ ಸಂಘದ ಸದಸ್ಯರ 20 ಮಕ್ಕಳಿಗೆ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.
ಮುಖಂಡರಾದ ಲೋಕೇಶ್ವರ, ಡಾ.ವಿವೇಚನ್, ಕೆ.ಟಿ.ಶಾಂತಕುಮಾರ್, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ಸುವರ್ಣ, ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕ ಮಧು, ಪೂಜಾ ಸಮಿತಿ ಸದಸ್ಯರಾದ ರಂಗಸ್ವಾಮಿ, ಶೇಷಾದ್ರಿ, ವಿಶ್ವೇಶ್ವರಯ್ಯ, ದಿನೇಶ್, ಯೋಜನೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.