ಖಾಸಗೀಕರಣ ವಿರೋಧಿಸಿ ಜ.30 ರಂದು ಸಂಸತ್ತಿಗೆ ಮುತ್ತಿಗೆ : ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕಾ.ಕೆ.ಎನ್.ಉಮೇಶ್

udyoga-lokasabhe
Published on

ಮೈಸೂರು: ದೇಶದ ಬಡವರು, ರೈತರ ಹಿತ ಕಾಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ಮತ್ತೊಂದೆಡೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀ ಕರಣಗೊಳಿಸಲು ಸರ್ಕಾರ ಹೆಚ್ಚಿನ ಉತ್ಸಾಹ ತೋರುತ್ತಿದ್ದು, ಸರ್ಕಾರದ ನಿಲುವನ್ನು ವಿರೋಧಿಸಿ ಜ.30 ರಂದು ಸಂಸತ್ತಿಗೆ ಮುತ್ತಿಗೆ ಹಾಕ ಲಾಗುವುದು ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕಾ.ಕೆ.ಎನ್.ಉಮೇಶ್ ಹೇಳಿದರು.

ನಗರದ ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಅಂಚೆ ನೌಕರರ ಒಕ್ಕೂಟ ಹಮ್ಮಿಕೊಂಡ ಅಂಚೆ ನೌಕರರ 12ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಿಐಟಿಯು ನೇತೃತ್ವದಲ್ಲಿ ಸಂಸತ್ತಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂಚೆ ನೌಕರರ ಸಂಘವೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಸ್ವಾಮ್ಯದ ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಇದೀಗ ಅಂಚೆ ಇಲಾಖೆಯ ಮೇಲೂ ಸರ್ಕಾರದ ಕಣ್ಣು ಬಿದ್ದಿದೆ. ಸರ್ಕಾರದ ನಿಲುವಿನಿಂದ ದೇಶದ ಸಂಪತ್ತು ಕೆಲವೇ ಕೆಲವರ ಕೈ ಸೇರುತ್ತಿದೆ. ಹೀಗಾಗಿ ದೇಶದ ಜನರ ಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಿತಿಯಲ್ಲಿಯೇ ಇದೆ. ಬಡವರು, ರೈತರು, ಕಾರ್ಮಿಕ ವರ್ಗ, ಕೂಲಿಕಾರ್ಮಿಕರು, ಶೋಷಿತಸಮುದಾಯಗಳು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಖಾಸಗೀಕರಣಕ್ಕೆ ನೀಡುತ್ತಿರುವ ಆಸಕ್ತಿ ಕೇಂದ್ರ ಸರ್ಕಾರದ ಒಡೆತನದ ಸಂಸ್ಥೆಗಳ ಸುಧಾರಣೆಗೆ ನೀಡುತ್ತಿಲ್ಲ. ಖಾಸಗೀಕರಣ ಹುನ್ನಾರಕ್ಕೆ ಬ್ರೇಕ್ ಬೀಳದೇ ಇದ್ದರೆ ಮೀಸಲಾತಿ ಸೌಲಭ್ಯವೂ ಮರಿಚಿಕೆಯಾಗಲಿದೆ ಎಂದು ವಿಷಾದಿಸಿದರು.

ಸಮಾವೇಶದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಯು.ಕೆ. ತಿವಾರಿ, ಪದಾಧಿಕಾರಿಗಳಾದ ಎಸ್. ರಾಜೇಂದ್ರ ಕುಮಾರ್, ಆರ್.ಎನ್.ಪರಶಾರ್, ಸಿ.ಸಿ.ಪಿಳ್ಳೈ, ಕೆ.ರಾಘವೇಂದ್ರನ್, ತಪನ್ ಬೌಮಿಕ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net