

ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿ ಮನೋರಂಜನ್ ಕುರಿತು ಕಳೆದ 10 ದಿನಗಳಿಂದ ನಗರದಲ್ಲಿ ಬೀಡು ಬಿಟ್ಟು ಮಾಹಿತಿ ಕಲೆಹಾಕುತ್ತಿರುವ ದೆಹಲಿ ಪೊಲೀಸರು ವಿಚಾರಣೆ ಬಹುತೇಕ ಮುಕ್ತಾಯ ಹಂತ ತಲುಪಿದೆ.
ಮನೋರಂಜನ್ ಪಾಲಕರನ್ನು ನಾಲ್ಕು ಬಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಮನೋರಂಜನ್ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ವಿಚಾರಣೆ ಬಹುತೇಕ ಮುಕ್ತಾಯ ಹಂತ ತಲುಪಿರುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ದೆಹಲಿ ಪೊಲೀಸರು ನಿರ್ಗಮಿಸುವ ಸಾಧ್ಯತೆ ಇದೆ. ದೆಹಲಿ ಪೊಲೀಸರು ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೆ ಮನೋರಂಜನ್ ಪಾಲಕರಾದ ದೇವರಾ ಜೇಗೌಡ ಮತ್ತು ಶೈಲಜಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ದೆಹಲಿ ಪೊಲೀಸರು ಬಾಷಾಂತರಕಾರರ ನೆರವು ಪಡೆದು ಮನೋರಂಜನ್ ಪಾಲಕರಿಂದ ಸಾಕಷ್ಟು ಮಾಹಿತಿ ಕಲೆಹಾಕಿದರು.
ಮನೋರಂಜನ್ ಮನೆಯಲ್ಲಿ ದೊರೆತ ಡೈರಿಯ ಆಧಾರದ ಮೇಲೆ ಮನೋರಂಜನ್‌ಗೆ ಹೇರ್ ಸೂಲೂನ್ ಮಾಲೀಕ ಸೂರಪ್ಪ ಹಣಕಾಸಿನ ನೆರವು ನೀಡುತ್ತಿದ್ದ ವಿಚಾರ ಬೆಳಕಿ ಬಂದು, ಸೂರಪ್ಪ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.