ಕಾರ್ಮಿಕರ ನೆರವಿಗೆ ಧಾವಿಸಿದ ಸಂಸದೆ, ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಬಾಡಿಗೆ ನೀಡದ್ದಕ್ಕೆ ಹೊರಹಾಕಿದ್ದ ಮಾಲೀಕ

14ank news and photos 01
?????????????????????????????????????????????????????????????????????????????????????????????????????????????????????????????????
Published on

ಆನೇಕಲ್: ಬಾಡಿಗೆ ನೀಡಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕ ಹೊರಹಾಕಿದ್ದರಿಂದ ಬುಧವಾರ ರಾತ್ರಿ ಮೆಟ್ರೋ ಸೇತುವೆ ಕೆಳಗೆ ಕಾಲ ಕಳೆದಿದ್ದ ಕಾರ್ಮಿಕರಿಗೆ ಸಂಸದೆ ಶೋಭಾ ಕರಂದ್ಲಾಜೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದಾರೆ.

ಹೆಬ್ಬಗೋಡಿಯಲ್ಲಿ ವಾಸವಿದ್ದ ಜಾರ್ಖಂಡ್ ಮೂಲದ 14 ಕಾರ್ಮಿಕರು ಅಲ್ಲಿನ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದರು. ಅವರು ಶೋಭಾ ಕರಂದ್ಲಾಜೆ ಗಮನಕ್ಕೆ ತಂದಿದ್ದರು. ಗುರುವಾರ ಬೆಳಗ್ಗೆ ಶೋಭಾ ಕರಂದ್ಲಾಜೆ ಆಹಾರಧಾನ್ಯ ತಂದು ಕಾರ್ಮಿಕರನ್ನು ಬಿಎಂಟಿಸಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ದೊಡ್ಡ ನಾಗಮಂಗಲದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಸತಿ ಕಲ್ಪಿಸಿದ್ದಾರೆ.

ರಾಜ್ಯದ ಕಾರ್ಮಿಕರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಿದ್ಧವಿದೆ. ಯಾವುದೇ ಕಾರ್ಮಿಕರು ತೊಂದರೆಪಡುವ ಅವಶ್ಯಕತೆ ಇಲ್ಲ. ಮನೆಯಿಂದ ಹೊರ ಹಾಕಿದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಂಸದೆ ತಿಳಿಸಿದರು.

ಕಾರ್ಮಿಕ ಸುಹಾನ್ ಮಾತನಾಡಿ, ಎರಡು ತಿಂಗಳಿಂದ ಸಂಬಳ ಆಗದ ಹಿನ್ನೆಲೆಯಲ್ಲಿ ಬಾಡಿಗೆ ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ರಾತ್ರಿ ಮನೆ ಮಾಲೀಕರು ನಮ್ಮನ್ನು ಹೊರಗೆ ಕಳುಹಿಸಿದರು. ನಮಗೆ ಏನು ಮಾಡಬೇಕು ಎಂದು ತೋಚಲಿಲ್ಲ. ನಮ್ಮ ನೆರವಿಗೆ ಸಂಸದರು ಆಗಮಿಸಿ ಆಹಾರಧಾನ್ಯ ವಿತರಣೆ ಮಾಡಿ ಕಲ್ಯಾಣ ಮಂಟಪದಲ್ಲಿ ವಸತಿಗೆ ವ್ಯವಸ್ಥೆ ಮಾಡಿದ್ದಾರೆ ಎಂದರು.

ಹೆಬ್ಬಗೋಡಿ ನಗರಸಭೆ ಆಯುಕ್ತ ತಿಮ್ಮರಾಯಪ್ಪ, ಹೆಬ್ಬಗೋಡಿ ಠಾಣೆ ವೃತ್ತ ನಿರೀಕ್ಷಕ ಶೇಖರ್, ಪಿಎಸ್‌ಐ ಶಂಕರಪ್ಪ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶಿವಾನಂದ್, ಕಾರ್ಮಿಕ ನಿರೀಕ್ಷಕ ಧನಪಾಲ್ ನಾಯಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net